Advertisement
ಹುಣಸೂರು ನಗರಸಭೆ ಅಧ್ಯಕ್ಷೆ ಸಮಿನಾ ಪರ್ವಿನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ತೂರಿ ಬಂದ ಸಮಸ್ಯೆಗಳ ಸರಮಾಲೆ ಇಂತಿವೆ:
Related Articles
Advertisement
ಮಳಿಗೆ ಹರಾಜು ಹಸ್ತಾಂತರವಾಗಿಲ್ಲವೇಕೆ: ನೂರು ಮಳಿಗೆಗಳ ಹರಾಜು ಹಾಕಿ ಆರು ತಿಂಗಳಾದರೂ ಇನ್ನೂ ಹಸ್ತಾಂತರಿಸದೆ ನಗರಸಭೆಗೆ ಲಕ್ಷಾಂತರ ರೂ. ನಷ್ಟವಾದ ಬಗ್ಗೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ಕೆಲ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕುತ್ತರವಾಗಿ ಕೆಲ ಪ್ರಕ್ರಿಯೆಯಿಂದ ತಡವಾಗಿದೆ. 12 ಮಳಿಗೆ ಬಾಡಿಗೆದಾರರು ನ್ಯಾಯಾಲಯಕ್ಕೆ ಹೋಗಿದ್ದಾರೆ. 38 ಮಂದಿ ಡಿ.ಡಿ. ಕಟ್ಟಿದ್ದಾರೆ. 7ಮಂದಿಗೆ ಅಗ್ರಿಮೆಂಟ್ ಆಗಿದೆ. ಉಳಿದ ಮಳಿಗೆಗಳನ್ನು ಶೀಘ್ರ ನೊಂದಾಯಿಸಲಾಗುವುದೆಂದು ಪೌರಾಯುಕ್ತರು ಭರವಸೆ ಇತ್ತರು.
ನಗರೋತ್ಥಾನ ವಿಳಂಬಕ್ಕೆ ಆಕ್ರೋಶ: ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆ ಅನುದಾನ ಬಂದರೂ ಇನ್ನೂ ಟೆಂಡರ್ ಆಗಿಲ್ಲ. ಮಂಜುನಾಥ ಬಡಾವಣೆಯ ಅಭಿವೃದ್ದಿ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿ, ಸಾರ್ವಜನಿಕರಿಂದಾಗಿ ಅಸಮಾಧಾನವಾಗುತ್ತಿರುವ ಬಗ್ಗೆ ಹೇಳಿದರ ಸದಸ್ಯರಿಗೆ, ಕೇವಲ ಇಬ್ಬರು ಇಂಜಿನಿಯರ್‌ಗಳಿದ್ದು, ಕಷ್ಟ ಸಾಧ್ಯವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿದೆ. ಮಂಜುನಾಥ ಬಡಾವಣೆಯ ರಾಜಕಾಲುವೆಗೆ ಸಂಬಂಧಿಸಿದಂತೆ ಡ್ರೋಣ್ ಸರ್ವೆ ಮಾಡಲಾಗಿದೆ.
ಇತರೆ ಸಮಸ್ಯೆಗಳು:
ಕಳೆದ ನಾಲ್ಕು ವರ್ಷಗಳಿಂದಲೂ ಬೀದಿ ದೀಪ ಸಮಸ್ಯೆ ರಾರಾಜಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ, ಪೌರಕಾರ್ಮಿಕರ ಕಾಲೋನಿ, ಒಂಟೆ ಪಾಳ್ಯಬೋರೆ, ಶಿವಜ್ಯೋತಿ ನಗರ ಸೇರಿದಂತೆ ಹಲವು ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಸದೇ ಇರುವ ಬಗ್ಗೆ ಪ್ರಶ್ನಿಸಿದಕ್ಕೆ ಅಗತ್ಯ ಕ್ರಮ ವಹಿಸುವುದಾಗಿ ಅಧ್ಯಕೆ, ಉಪಾಧ್ಯಕ್ಷರು ತಿಳಿಸಿದರು.
ಸಿಬ್ಬಂದಿಗಳ ಕೊರತೆ ಸಾಕಷ್ಟಿದ್ದು, ಆಡಳಿತ ನಿರ್ವಹಣೆಗೆ ತೊಂದರೆಯಾಗಿದೆ. ಆದರೂ ನಗರೋತ್ಥಾನ ಯೋಜನೆ ಟೆಂಡರ್ ಹಂತದಲ್ಲಿದೆ. ಬೀದಿ ದೀಪ, ನೀರು ಮತ್ತಿತರ ಸಮಸ್ಯೆಗಳಿದ್ದಲ್ಲಿ ತ್ವರಿತವಾಗಿ ಬಗೆಹರಿಸಲಾಗುವುದು. ಸದಸ್ಯರು ಸಹಕಾರ ನೀಡಿದಲ್ಲಿ ತ್ವರಿತವಾಗಿ ಕೆಲಸವಾಗಲಿದೆ. ಈಗಾಗಲೆ ಖಾತೆ ಶಾಖೆಯ ಎಲ್ಲ ಕಡತಗಳ ವಿಲೇವಾರಿ ಮಾಡಿದ್ದೇನೆಂದು ಪೌರಾಯುಕ್ತರ ಭರವಸೆ ನೀಡಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ನಾಮಕರಣ ಸದಸ್ಯರು ಸೇರಿದಂತೆ ಬಹುತೇಕ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.