ಹುಣಸೂರು: ತೆರವಾಗಿದ್ದ ತಾಲೂಕಿನ ಬನ್ನಿಕುಪ್ಪೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ ಮಹಿಳೆ)ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಂಬಿಕಾ ರಾಘು 12 ಮತ ಗಳಿಸಿ ಚುನಾಯಿತರಾದರು.
ಆಂತರಿಕ ಒಪ್ಪಂದದಂತೆ ಹಿಂದಿನ ಉಪಾಧ್ಯಕ್ಷೆ ಸುಂದರಮ್ಮ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಂಬಿಕಾ ರಾಘು 12 ಮತ ಗಳಿಸಿ ಚುನಾಯಿತರಾಗಿದ್ದರೆ.
ಪ್ರತಿಸ್ಪರ್ಧಿ ನಾಗಮಣಿ 8 ಮತ ಗಳಿಸಿ ಪರಾಭವಗೊಂಡರು. 21 ಸದಸ್ಯರ ಪೈಕಿ ಒಬ್ಬರ ಮತ ಅಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ನೇತ್ರಾವತಿ ಘೋಷಿಸಿದರು.
ಹರೀಶ್ ಗೌಡ ಅಭಿನಂದನೆ:
ಉಪಾಧ್ಯಕ್ಷರಾಗಿ ಆಯ್ಕೆಯಾದ ಅಂಬಿಕಾ ರಾಘುರನ್ನು ಅಭಿನಂದಿಸಿದ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ, ಪಕ್ಷ-ಜಾತಿ ಬೇದ ಮರೆತು ಕಾರ್ಯ ನಿರ್ವಹಿಸುವಂತೆ ಸೂಚಿಸಿ, ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ ನಡೆಯಲಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ವೇಳೆ ತಾಲೂಕು ಜೆಡಿಎಸ್ ಉಪಾಧ್ಯಕ್ಷ ದೇವರಾಜ ಒಡೆಯರ್, ಮುಖಂಡರಾದ ಕೆಂಗಯ್ಯ, ಗೋವಿಂದೇಗೌಡ, ಕೂಸಪ್ಪ, ಬಿ.ಪಿ.ಮಂಜು, ಚಂದ್ರೇಗೌಡ, ವಾಸುಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.