Advertisement

ಹುಣಸೂರು : ಕಟ್ಟೆಮಳಲವಾಡಿಯಲ್ಲಿ ಸಿಡಿಜಾತ್ರೆ

04:21 PM Apr 16, 2022 | Team Udayavani |

ಹುಣಸೂರು : ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಶುಕ್ರವಾರ ಸಂಜೆ ಮಳೆಯ ಸಿಂಚನದ ನಡುವೆಯೇ ನಡೆದ ಶ್ರೀ ಸಿಡಿಯಮ್ಮ ಜಾತ್ರೆ ಅಂಗವಾಗಿ  ದೇವರ ಅವಹಗಾನೆಗೆ ಒಳಗಾದ ಐವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಡಿಯೇರಿ ಸಿಡಿಯಾಡಿದರು. ಸಿಡಿಯಾಡುವುದನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾದರು.

Advertisement

ಗ್ರಾಮದ ಫ್ರೌಡಶಾಲಾ ಆವರಣದಲ್ಲಿ ನಡೆದ ಸಿಡಿ ಹಬ್ಬದ ಅಂಗವಾಗಿ ಮದ್ಯಾಹ್ನ ಕಟ್ಟೆಮಳಲವಾಡಿ, ಕೊಪ್ಪಲು, ಕಲ್ಕುಣಿಕೆ, ಬೆಳ್ತೂರು ಗ್ರಾಮಗಳಿಂದ ಮೆರವಣಿಗೆಯಲ್ಲಿ ಬಂದ ಎಲ್ಲಾ ದೇವರ ಅವಹಗಾನೆಗೆ ಒಳಗಾದವರು ಲಕ್ಷ್ಮಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ.  ಪೂಜೆ ಮಾಡಿಕೊಂಡು ಮೂಲ ಸ್ಥಾನಕ್ಕೆ ಹೋಗಿ ಮತ್ತೆ ಪೂಜೆ ಸಲ್ಲಿಸಿ ನಂತರ ಜಾತ್ರೆಯ ಮಾಳಕ್ಕೆ ಬಂದು ಸಿಡಿ ಉತ್ಸವದ ಮಲಗಂಭಕ್ಕೆ ಪೂಜೆ ಸಲ್ಲಿಸಿ ನಂತರ ದೇವರು ಅವಹಗಾನೆಗೆ ಒಳಗಾದವರು  ಸಿಡಿ ಏರಿ ಸಿಡಿಯಾಡಿದರು. ಇದಕ್ಕೂ ಮುನ್ನಾ ಗ್ರಾಮದ ಯಜಮಾನ ಕೃಷ್ಣಶೆಟ್ಟಿಯವರು ಸಂಪ್ರದಾಯದಂತೆ ಸಿಡಿ ರಥಕ್ಕೆ ಪೂಜೆ ಸಲ್ಲಿಸಿದರು.

ಈ ವೇಳೆ ಸಿಡಿಯ ರಥಕ್ಕೆ ಹರಕೆ ಹೊತ್ತವವರು ಜೀವಂತ ಕೋಳಿ ಎಸೆದು ಹರಕೆ ತೀರಿಸಿದರೆ, ನವ ದಂಪತಿಗಳು, ಭಕ್ತರು,  ಹಣ್ಣು-ಜವನ ಎಸೆದು ಭಕ್ತಿ ಬಾವ ಮೆರೆದರು.

ಸಿಡಿಗೆ ಅಡ್ಡಿಯಾಗಿದ್ದ ಮಳೆ;

ಕಳೆದ ಎರಡು  ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸಿಡಿ ಜಾತ್ರೆ ನಿಂತು ಹೋಗಿತ್ತು. ಈ ಬಾರಿ ನೆಮ್ಮದಿಯಿಂದ ಜಾತ್ರೆ ನಡೆಯಲಿದೆ ಎಂಬ ಸಂತಸದಿಂದಲೇ ಜಾತ್ರಾ ಮಾಳ ಸೇರಿದಂತೆ ಹುಣಸೂರು-ಕೆ.ಆರ್.ನಗರ ರಸ್ತೆಯಲ್ಲಿ ಸಾವಾರಾರು ಮಂದಿ ಸಿಡಿ ವೀಕ್ಷಿಸಲು ಸೇರಿದ್ದರು. ಸಂಜೆ ೫ರ ವೇಳೆಗೆ ಮಳೆಯ ಸಿಂಚನ ಆರಂಭವಾಗಿ ಬಹಳ ಹೊತ್ತು ಸುರಿಯಿತು ಗ್ರಾಮಸ್ಥರು, ಭಕ್ತರು, ಸಂಘಟಕರಲ್ಲಿ  ಆತಂಕ ಮೂಡಿತ್ತು. ಸುಮಾರು ಒಂದು ಗಂಟೆಯ ನಂತರ ವರುಣ ಸಿಡಿಯಾಟಕ್ಕೆ ಕೃಪೆ ತೋರಿದ, ನಂತರ ಮಳೆಯಿಂದಾಗಿ ಆಶ್ರಯ ಪಡೆದಿದ್ದ ಭಕ್ತರು ಮತ್ತೆ ಜಾತ್ರಾ ಮಾಳಾಕ್ಕೆ ಆಗಮಿಸಿ ಸಿಡಿ ಸಂಭ್ರಮದಲ್ಲಿ ಭಾಗಿಯಾದರು.

Advertisement

ಈ ಸಿಡಿ ಉತ್ಸವದಲ್ಲಿ ಶಾಸಕ ಹೆಚ್.ಪಿ ಮಂಜುನಾಥ್, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಜೆಡಿಎಸ್‌ಅದ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ದೇವರಾಜ್‌ಒಡೆಯರ್, ಗ್ರಾಮದ ಮುಖಂಡರಾದ ಶಂಕರಯ್ಯ,  ನಾಗರಾಜ್ ಮಲ್ಲಾಡಿ, ನಿಂಗರಾಜಮಲ್ಲಾಡಿ, ಸಂತೋಷ್, ಗ್ರಾ.ಪಂ. ಪ್ರತಿನಿಗಳು  ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next