Advertisement

Hunsur: ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಇನ್ಸ್ಪೆಕ್ಟರ್ ಮುನಿಯಪ್ಪ

12:47 PM Sep 04, 2024 | Team Udayavani |

ಹುಣಸೂರು: ಗಣಪತಿ ಪ್ರತಿಷ್ಠಾಪನಾ ಸಮಿತಿಯವರು ಇಲಾಖೆಯ ನಿಯಮಗಳನ್ನು ಪಾಲಿಸುವ ಜೊತೆಗೆ ಇತರರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಮುನಿಯಪ್ಪ ಸೂಚಿಸಿದರು.

Advertisement

ಗ್ರಾಮಾಂತರ ಠಾಣೆಯ ಆವರಣದಲ್ಲಿ ಮುಂಬರುವ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

1 ವಾರದ ಅಂತರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಹಬ್ಬ ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಗಣಪತಿ ಪ್ರತಿಷ್ಠಾಪಿಸುವ ಸಮಿತಿಯವರು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು ಎಂದು ಹೇಳಿದರು.

ಮುಂದುವೆರದು ಮಾತನಾಡಿ, ನಿರ್ದಿಷ್ಟ ಸ್ಥಳದಲ್ಲೇ ವಿಸರ್ಜನೆ ಮಾಡಬೇಕು. ತಡರಾತ್ರಿವರೆಗೆ ಮೈಕ್ ಹಾಕುವಂತಿಲ್ಲ. ಮನರಂಜನಾ ಕಾರ್ಯಕ್ರಮಗಳಿದ್ದಲ್ಲಿ ಮುಂಚಿತವಾಗಿ ಬೀಟ್ ಪೊಲೀಸ್ ಅಥವಾ ಠಾಣೆಗೆ ಮಾಹಿತಿ ನೀಡಬೇಕು. ಹೆಚ್ಚು ಶಬ್ದದ ಪಟಾಕಿ, ಡಿ.ಜೆ.ಗೆ ನಿಷೇಧ ಎಂದು ತಿಳಿಸಿದರು.

Advertisement

ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಮಿತಿಯವರ ವಿರುದ್ದ ಕಾನೂನು ಕ್ರಮವಾಗಲಿದೆ ಎಂದು ಎಚ್ಚರಿಸಿ, ವಾರದ ಅಂತರದಲ್ಲೇ ಈದ್ ಮಿಲಾದ್ ಹಬ್ಬ ಬರಲಿದ್ದು, ಈ ವೇಳೆ ನಿಗದಿತ ಸಮಯದಲ್ಲಿ ಪ್ರಾರ್ಥನೆ, ಮೆರವಣಿಗೆ ನಡೆಸಬೇಕು. ಎರಡೂ ಧರ್ಮದವರು ಕಾನೂನು ಸುವ್ಯವಸ್ಥೆ, ಶಾಂತಿ, ಸಾಮರಸ್ಯ  ಕಾಪಾಡಲು ಸಹಕಾರ ನೀಡಬೇಕು ಎಂದು ಹೇಳಿದರು.

ಈ ವೇಳೆ ಎಸ್.ಐ.ರಾಮು, ನಗರಸಭಾ ಸದಸ್ಯ ಗಣೇಶ್‌ ಕುಮಾರ ಸ್ವಾಮಿ, ನಿಲುವಾಗಿಲು ಪ್ರಭಾಕರ್, ರತ್ನಪುರಿ ಡೇವಿಡ್ ಸೇರಿದಂತೆ ಅನೇಕ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next