Advertisement

ಹುಣಸೂರು: ಪಂಚಾಯತ್ ಕಚೇರಿಗೆ ಬೀಗ ಜಡಿದು ಅಧ್ಯಕ್ಷ, ಸದಸ್ಯರ ಪ್ರತಿಭಟನೆ

08:42 PM Apr 18, 2022 | Team Udayavani |

ಹುಣಸೂರು: ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆರೋಪಗಳನ್ನು ಮಾಡಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಸಮೀಪದ ಉಮ್ಮತ್ತೂರು ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆಯಿತು.

Advertisement

ಪಿಡಿಒ ಕೆಂಚೇಗೌಡರವರು ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಕೆಲವು ಕಾಮಗಾರಿಯನ್ನು ಮಾಡಿ ಬಿಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಭಾಗದ ಸಾರ್ವಜನಿಕರು ದಾಖಲೆಗಳಿಗೆ ಬಂದರೆ ಹಣಕೊಟ್ಟರೆ ಮಾತ್ರ ಕೆಲಸ ಮಾಡಿ ಕೋಡುತ್ತಾರೆ. ಇಲ್ಲದಿದ್ದರೆ ಇಲ್ಲ ಸಲ್ಲದ ನೆಪ ಹೇಳಿ ತಿಂಗಳುಗಟ್ಟಲೆ ಸಾರ್ವಜನಿಕರನ್ನು ಸತಾಯಿಸುತ್ತಾರೆ, ಅಲ್ಲದೆ ಪಂಚಾಯಿತಿ ಸಿಬ್ಬಂದಿಗಳೆ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

ನರೇಗಾ ಯೋಜನೆಯಡಿಯಲ್ಲಿ ಮಾಡಿರುವ ಮೀನುಕೊಳ ಮತ್ತು ಚರಂಡಿಗಳ ನಿರ್ಮಾಣ ಮಾಡಿದ್ದು ಲಂಚ ನೀಡಿರುವವರಿಗೆ ಮಾತ್ರ ಬಿಲ್ ಮಾಡಿದ್ದು ಉಳಿದ ಫಲಾನುಭವಿಗಳಿಗೆ ಅಲೆದಾಡಿಸುತ್ತಿದ್ದಾರೆ. ಮನೆಗಳ ಜಿಪಿಎಸ್ ಮಾಡಲು ಐದರಿಂದ ಹತ್ತು ಸಾವಿರ ಕೊಡುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಅನಸೂಯ,ಸದಸ್ಯರಾದ ಚಂದ್ರೇಗೌಡ ಶೇಖರ್ ಶಿವರಾಜ್ ನಂಜುಂಡಸ್ವಾಮಿ ಅಲ್ಲದೆ ಗ್ರಾಮದ ಮುಖಂಡರು ಬೀಗ ಜಡಿದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ತಾ ಪಂ ಇಓ ಹೆಚ್. ಡಿ. ಗಿರೀಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ತೊಡಗಿದ್ದವರ ಮನವೊಲಿಸಿ ಬೀಗ ತೆಗೆಸಿದರು. ಅಧ್ಯಕ್ಷರು ಮತ್ತು ಸದಸ್ಯರಿಗೆ ನೀವು ದೂರು ನೀಡಿದ್ದೀರಿ ಪರಿಶೀಲಿಸಿ ನಾನು ಜಿಲ್ಲಾ ಪಂಚಾಯತ್ ಗೆ ಕಳುಹಿಸಿ ನಂತರ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಎಲ್ಲರು ವಾಪಸ್ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next