ಹುಣಸೂರು: ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಸ್ಮಶಾನ ಭೂಮಿ ಖರೀದಿಗಾಗಿ ನಾಯಕ ಸಮಾಜದ ಯಜಮಾನರಿಗೆ 7 ಲಕ್ಷ ರೂ. ನೆರವನ್ನು ಶಾಸಕ ಎಚ್.ಪಿ. ಮಂಜುನಾಥ್ ನೀಡಿದರು.
ಶಾಸಕ ಮಂಜುನಾಥ್‌ರವರು ಗುರುವಾರದಂದು ಎಚ್.ಡಿ.ಕೋಟೆ ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಗ್ರಾಮಕ್ಕೆ ಆಗಮಿಸಿ ಭರವಸೆ ಇತ್ತಂತೆ 7 ಲಕ್ಷ ರೂ. ಹಣವನ್ನು ಸಮಾಜದ ಯಜಮಾರಿಗೆ ನೀಡಿ ಮಾತನಾಡಿದ ಶಾಸಕರು ಕಳೆದ ಸುಮಾರು 30 ವರ್ಷಗಳಿಂದ ನಾಯಕ ಸಮಾಜಕ್ಕೆ ಸ್ಮಶಾನ ಇಲ್ಲದೆ ಮಾಜಿ ಶಾಸಕ ಎಸ್. ಚಿಕ್ಕಮಾದುರವರ ಕಾಲದಿಂದಲೂ ಹೋರಾಟ ನಡೆಯುತ್ತಿತ್ತು.
ಗ್ರಾಮದ ಸ್ಮಶಾನ ಭೂಮಿ ಮಂಜೂರು ಮಾಡುವುದು ಚಿಕ್ಕಮಾದು ಸಾಹೇಬರ ಕನಸಾಗಿತ್ತು. ಕಳೆದ 5 ತಿಂಗಳ ಹಿಂದೆ ಧರ್ಮಪುರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸಮಾಜದ ಯಜಮಾನರು ಸ್ಮಶಾನ ಭೂಮಿಗಾಗಿ ಭೂಮಿ ಇಲ್ಲದೆ ಶವ ಸಂಸ್ಕಾರ ನಡೆಸಲು ಸಮಸ್ಯೆಯಾಗಿದ್ದು, ಚಿಕ್ಕಮಾದು ರವರ ಕಾಲದಿಂದಲೂ ತಾಲೂಕು ಕಚೇರಿಗೆ ಅಲೆದು ಸಾಕಾಗಿದ್ದೇವೆ. ಭೂಮಿ ನೀಡಲು ಮುಂದೆ ಬಂದಿದ್ದು, 10 ಲಕ್ಷರೂ ಆಗಲಿದೆ ಎಂಬ ಮನವಿ ಮಾಡಿದ್ದರು. ತಮ್ಮ ತಾಯಿಯವರ ಹೆಸರಿನಲ್ಲಿ ನೆರವಾಗುವುದಾಗಿ ವಾಗ್ದಾನ ಮಾಡಿದ್ದಂತೆ ಇಂದು ನೆರವಾಗಿದ್ದೇನೆ ಮುಂದೆಯೂ ಈ ಸಮುದಾಯದ ನೆರವಿಗೆ ನಿಲ್ಲುವುದಾಗಿ ಭರವಸೆ ಇತ್ತರು.
ಅನಿಲ್ ಚಿಕ್ಕಮಾದು ಮಾತನಾಡಿ, ನಮ್ಮ ತಂದೆ ಚಿಕ್ಕಮಾದು ರವರ ಕನಸನ್ನು ಶಾಸಕ ಮಂಜಣ್ಣ ನೆರವೇರಿಸಿದ್ದಾರೆ. ನಮ್ಮ ತಂದೆಯ ಆತ್ಮಕ್ಕೆ ಇವತ್ತು ಶಾಂತಿ ಸಿಕ್ಕಿದೆ. ನಾನು ಸಹ 1 ಲಕ್ಷ ರೂ. ಗಳನ್ನು ನೀಡುತ್ತೇನೆಂದು ಹೇಳಿದರು. ಶಾಸಕ ಮಂಜುನಾಥರಿಗೆ ಮುಂಬರುವ ಬರುವ ಚುನಾವಣೆಯಲ್ಲಿ ನಮ್ಮ ಸಮಾಜದವರು ಅವರ ಕೈ ಬಲಪಡಿಸಿ ಅವರನ್ನು ಮಂತ್ರಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಶಾಸಕರಾದ ಮಂಜುನಾಥ್ ಹಾಗೂ ಅನಿಲ್ ಚಿಕ್ಕಮಾದುರನ್ನು ಸನ್ಮಾನಿಸಿ ಗೌರವಿಸಿದರು.
ನಾಡಯಜಮಾನ ವೀರಭದ್ರ ಶೆಟ್ಟಿ, ನಾಯಕ ಸಮುದಾಯದ ಯಜಮಾನ ರಾಮದಾಸ ನಾಯಕ, ಸೋಮನಾಯಕ, ಚಿಕ್ಕಯಜಮಾನ ಸೋಮಣ್ಣಶೇಟ್ಟಿ, ಸಣ್ಣನಾಯಕ, ವಾಲ್ಮಿಕಿ ಸಂಘಧ ಅಧ್ಯಕ್ಷ ನಾರಾಯಣ ನಾಯಕ, ಸಂಘದ ಕಾರ್ಯದರ್ಶಿ ಗವಿನಾಯಕ, ಜಿ.ಪಂ.ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ಜಮೀನು ಮಾಲಿಕ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಪುಟ್ಟಮಾದಯ್ಯ, ಧರ್ಮಾಪುರಶೇಖರ್, ವಿವಿಧಕೋಮಿನ ಯಜಮಾನರು, ಮಾಜಿ ಯಜಮಾನರು ಸೇರಿದಂತೆ ಅನೇಕರಿದ್ದರು.