Advertisement
ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ:ಚಿಕ್ಕಹುಣಸೂರಿನಲ್ಲಿನ ಮರಿಯಮ್ಮರಿಗೆ ಸೇರಿದ 5ಎಕರೆ ಫಲಕ್ಕೆ ಬಂದಿದ್ದ ನೇಂದ್ರ ಬಾಳೆ ತೋಟದ ಎಲ್ಲಾ ಗಿಡಗಳು ಬಾಗಿಹೋಗಿದ್ದು, ಸುಮಾರು 8 ಲಕ್ಷರೂ. ನಷ್ಟು ನಷ್ಟ ಉಂಟಾಗಿದ್ದು, ರೈತ ಮಹಿಳೆ ಕಣ್ಣೀರಿನಲ್ಲಿ ಕೈತೋಳೆಯುವಂತಾಗಿದೆ, ಸರಕಾರ ಮಳೆ ಹಾನಿ ನಷ್ಟಕ್ಕೆ ತಕ್ಕಂತೆ ಪಂಜಾಬ್ ಮಾದರಿಯಲ್ಲಿ ಪರಿಹಾರ ನೀಡುವಂತೆ ಅವರ ಪುತ್ರ ನಗರದ ಬನ್ನಿ ಬೀದಿಯ ರಮೇಶ್‌ಬಾಬು ಒತ್ತಾಯಿಸಿದ್ದಾರೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ತಾಲೂಕಿನ ಗಾವಡಗೆರೆಯಲ್ಲಿ 5, ಕಿರಿಜಾಜಿಯಲ್ಲಿ 4, ದೊಡ್ಡ ಹೆಜ್ಜೂರಿನಲ್ಲಿ 2, ಚಿಲ್ಕುಂದ ಭಾಗದಲ್ಲಿ ಒಂದು ಸೇರಿದಂತೆ 12 ವಿದ್ಯುತ್ ಕಂಬಗಳು, ಕಟ್ಟೆಮಳಲವಾಡಿ ಗ್ರಾಮದೊಳಗೆ ಮರ ಮತ್ತು ವಿದ್ಯುತ್ ಕಂಬ ಉರುಳಿ ಬಿದ್ದು ಆಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಹುಣಸೂರಿನ ಮೂಕನಹಳ್ಳಿ ಬಳಿಯ ಹಾಲಿನ ಡೇರಿ ಬಳಿಯ 240 ಕಿಲೋವ್ಯಾಟ್ ಮಾರ್ಗದ ವಿದ್ಯುತ್ ಲೈನ್ ಟ್ವಿಸ್ಟ್ ಆಗಿದ್ದು, ಮಡಿಕೇರಿ ಜಿಲ್ಲೆಯಲ್ಲಿ ಭಾಗಶಃ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಎಇಇ ಸಿದ್ದಪ್ಪ ತಿಳಿಸಿದ್ದಾರೆ.
Related Articles
Advertisement
ರಸ್ತೆ ಬಂದ್:ನಗರಕ್ಕೆ ಸಮೀಪದ ಚಿಕ್ಕಹುಣಸೂರು ಬಳಿ ಬಾರೀ ಗಾತ್ರದ ಅರಳಿ ಹಾಗೂ ಮಾವಿನ ಮರ ಬಿದ್ದು ಟಿವಿಎಸ್ ಮೊಪೈಡ್ ಜಖಂಗೊಅಡಿದೆ. ಉಪ್ಕಾರ್ ಲೇ ಔಟ್ ಬಳಿಯಲ್ಲಿ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಕಟ್ಟೆಮಳಲವಾಡಿಯಲ್ಲಿ ಮನೆಯೊಂದರ ಮೇಲೆ ವಿದ್ಯುತ್ ಲೈ ಸಮೇತ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಗ್ರಾಮ ಸಂಪೂರ್ಣ ಕತ್ತಲೆ ಮಯವಾಗಿದೆ. ಅರಣ್ಯ ಸಿಬ್ಬಂದಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತೆಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದ್ದಾರೆ. ಇನ್ನು ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ತಾಲೂಕಿನಾದ್ಯಂತ ಹಾನಿ ಬಗ್ಗೆ ವರದಿಯಾಗುತ್ತಲೇ ಇದೆ. ಆಲಿಕಲ್ಲು ಮಳೆಗೆ ಮಾವು ನಾಶ:
ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮಾವಿನ ಬೆಳೆಗೆ ಸಾಕಷ್ಟು ಹಾನಿಯಾಗಿದ್ದರೆ, ತಂಬಾಕು ಸಸಿಮಡಿ ಮತ್ತಿತರ ಬೆಳೆಗೂ ಹಾನಿಯಾಗಿದೆ.