ಹುಣಸೂರು: ತಾಲೂಕಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ನಗರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದಿತ್ತಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಕಲ್ಕುಣಿಕೆ ಹತ್ತಿ ಮರದ ಬೀದಿಯ ನಿಂಗಣ್ಯರ ಮನೆ ಬಳಿಯ ತೆಂಗಿನ ಮರ ಬುಡ ಸಹಿತ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಮನೆ ಮೇಲ್ಚಾವಣಿಗೆ ಹಾನಿಯಾಗಿದ್ದರೂ ಮನೆಯವರು ಹೊರಗೆ ಹೋಗಿದ್ದರಿಂದಾಗಿ ಬಚಾವ್ ಆಗಿದ್ದಾರೆ.
ಇದೇ ರಸ್ತೆಯ ಮೂರು ವಿದ್ಯುತ್ ಕಂಬಗಳು ಧರೆಗುರುಳಿದೆ. ಸಂಜೆ 5ರ ವೇಳೆಗೆ ಆರಂಭವಾದ ಜಿಟಿಜಿಟಿ ಮಳೆ ರಾತ್ರಿ 8ರ ವೇಳೆಗೆ ಜೋರಾಗಿ ಬೀಳಲಾರಂಭಿಸಿದೆ. ಇದರಿಂದ ಮನೆಯಿಂದ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಬಂದಿದ್ದವರು ವಾಪಸ್ ತೆರಳಲಾಗದೆ ಪರದಾಡಿದರು.
ಭಾನುವಾರ ಆಗಿದ್ದರಿಂದ ಶಾಲಾ-ಕಾಲೇಜಿಗೆ ರಜೆ ಇದ್ದುದ್ದರಿಂದಾಗಿ ನಿಟ್ಟುಸಿರು ಬಿಟ್ಟರಾದರೂ ಸಾಮಗ್ರಿಗಳ ಖರೀದಿಗೆ ಬಂದಿದ್ದವರು ಮಳೆಯಿಂದಾಗಿ ಮನೆಗೆ ತೆರಳಲಾರದೆ ಪರದಾಡಿದರು.
ಭಾರಿ ಮಳೆಯಿಂದಾಗಿ ಹುಣಸೂರಿನಲ್ಲಿ ಜು.15ರ ಸೋಮವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.