ಹುಣಸೂರು : ಡಿ.7ರಂದು ಆಚರಿಸಲುದ್ದೇಶಿಸಿರುವ 29 ನೇ ವರ್ಷದ ಹನುಮಜಯಂತಿ ಮೆರವಣಿಗೆ ಅಂಗವಾಗಿ ಹಳೆ ವಿಜಯಾ ಬ್ಯಾಂಕ್ ಆವರಣದಲ್ಲಿ ತೆರೆದಿರುವ ಹನುಮಂತೋತ್ಸವ ಸಮಿತಿ ಕಾರ್ಯಾಲಯವನ್ನು ಸಾಂಬಸದಾಶಿವಸ್ವಾಮಿಜಿ ಹಾಗೂ ನಟರಾಜಸ್ವಾಮಿಜಿಗಳು ಜ್ಯೋತಿ ಬೆಳಗುವ ಮೂಲಕ ಉದ್ಘಾಠಿಸಿದರು.
ನಂತರ ಮಾತನಾಡಿದ ನಟರಾಜಸ್ವಾಮಿಜಿ ಹುಣಸೂರಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಹನುಮಂತೋತ್ಸವ ಮೆರವಣಿಗೆಯು 2-3 ವರ್ಷಗಳಿಂದ ಕೋವಿಡ್ ಮತ್ತಿತರ ಕಾರಣಗಳಿಂದ ಸರಳವಾಗಿ ಆಚರಿಸುವಂತಾಗಿತ್ತು. ಈ ಬಾರಿ ನಿಗದಿಯಂತೆ ಅದ್ದೂರಿಯಾಗಿ ಆಚರಿಸಲು ಸಮಿತಿಯವರು ಶ್ರಮಿಸಬೇಕೆಂದು ಕರೆ ನೀಡಿದರು.
ಸಾಂಬಸದಾಶಿವಸ್ವಾಮಿಜಿಗಳು ಮಾತನಾಡಿ ಹನುಮಂತ ಎಲ್ಲರೂ ಪೂಜಿಸುವ ಶಕ್ತಿ ದೇವತೆಯಾಗಿದ್ದು, ಈ ಬಾರಿಯ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಮಿತಿ ತೀರ್ಮಾನಿಸಿದ್ದು, ತಾಲೂಕಿನ ಜನತೆ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕೆಂದು ಸೂಚಿಸಿದರು.
ಉತ್ಸವ ಸಮಿತಿಯ ಅಧ್ಯಕ್ಷ ವೆಂಕಟನಾರಾಯಣದಾಸ್ ಮಾತನಾಡಿ ನಗರದಲ್ಲಿ ರಸ್ತೆಗಳ ನಿರ್ಬಂಧ ತೆರವಾಗಿದ್ದು, ಎಲ್ಲ ರಾಜಬೀದಿಗಳಲ್ಲೂ ಉತ್ಸವ ನಡೆಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ನಗರ ಸೇರಿದಂತೆ ತಾಲೂಕಿನ ವಿವಿಧ ಗರಡಿ ಮನೆಗಳಿಂದಲೂ ಹನುಮಂತನ ಉತ್ಸವ ಮೂರ್ತಿಗಳು ಸಾಗಿಬರಲಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಹನುಮಂತೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಸಮಿತಿಯ ಉಪಾಧ್ಯಕ್ಷ ಎಚ್.ವೈ.ಮಹದೇವ್, ಪಿ.ಆರ್.ರಾಚಪ್ಪ, ವರದರಾಜಪಿಳ್ಳೆ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ಗಣೇಶ್‌ಕುಮಾರಸ್ವಾಮಿ, ನಿರ್ದೇಶಕರಾದ ಸುಧಾಕರ್, ಚಂದ್ರಮೌಳಿ, ಸೂರಜ್ ಬಾಗಲ್, ದೀಪು, ಮಧು, ಗಣೇಶ, ನಮೋಯೋಗಿ, ಜಗದೀಶ, ಬಿಳಿಕೆರೆ ಮಧು, ಸ್ವರೂಪ್ ಶಿವಯ್ಯ, ಮಂಜುಮೊದಲಿಯಾರ್, ವಾಸುಕಿ, ಗಣೇಶ್ ಉಪಸ್ಥಿತರಿದ್ದರು.