Advertisement

Hunsur: ಉತ್ತಮ ಮಳೆ; ಲಕ್ಷ್ಮಣತೀರ್ಥ ನದಿ ಒಳ ಹರಿವು ಹೆಚ್ಚಳ

12:01 PM May 26, 2024 | Team Udayavani |

ಹುಣಸೂರು: ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಬೀಳುತ್ತಿರುವ ಜಡಿ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಭರ್ತಿಯಾಗಿದ್ದು, ಅಣೆಕಟ್ಟಿನಿಂದ ನೀರು ಹರಿಯುವ ದೃಶ್ಯ ಮನಮೋಹಕವಾಗಿದೆ.

Advertisement

ಈ ಬಾರಿ ಕಡು ಬೇಸಿಗೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ನಿಂತು, ಗುಂಡಿಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರಿತ್ತು. ಅಣೆಕಟ್ಟೆಯ ಕಲ್ಲುಗಳು ಕಾಣಲಾರಂಭಿಸಿದ್ದವು. ಇದರಿಂದ ಬೇಸಿಗೆ ಬೆಳೆಗೆ ಹಾಗೂ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.

ಕೊಡಗಿನ ಇರ್ಪುವಿನಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನದೊಳಗಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಗೆ ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಸುರಿದ ಸತತ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ದಿನೇ ದಿನೇ ಹೆಚ್ಚುತ್ತಿದ್ದು, ತಾಲೂಕಿನ ಹನಗೋಡು ಅಣೆಕಟ್ಟೆ ಮೇಲೆ ನೀರು ಹರಿಯಲಾರಂಬಿಸಿದೆ.

ಇದೀಗ ಹನಗೋಡಿನಿಂದ ಹುಣಸೂರಿನವರೆಗೆ ನೀರು ತಲುಪಿದ್ದು, ಹುಣಸೂರು ನಗರದ ಮಧ್ಯ ಭಾಗದಲ್ಲಿ ಹರಿಯುವ ನದಿಯ ಕಲುಷಿತ ನೀರನ್ನು ಕೊಚ್ಚಿಕೊಂಡು ಹೋಗಲು ನದಿಯಲ್ಲಿ ದೊಡ್ಡ ಮಟ್ಟದ ಪ್ರವಾಹ ಬರಬೇಕಿದೆ.

ಮುಖ್ಯ ಕಾಲುವೆ ಗೇಟ್‌ಗೆ ಸಿಲುಕಿರುವ ಮರದ ಕೊಂಬೆಗಳು: 

Advertisement

ನದಿಯ ಮುಖ್ಯ ಕಾಲುವೆಗೆ ನೀರು ಹರಿಸುವ ಗೇಟ್‌ಗೆ ಅಳವಡಿಸಿರುವ ಕಬ್ಬಿಣದ ತಡೆಗೋಡೆಗೆ ಸಾಕಷ್ಟು ಪ್ರಮಾಣದಲ್ಲಿ ಮರಗಳು ಸಿಲುಕಿಕೊಂಡಿದ್ದು, ನೀರಿನ ಸರಾಗ ಹರಿವಿಗೆ ಅಡಚಣೆಯಾಗಿದೆ.

ದುರಸ್ತಿ ನಂತರ ಕಾಲುವೆಗೆ ನೀರು:

ಹನಗೋಡು ಅಣೆಕಟ್ಟೆಯಿಂದ ತಾಲೂಕಿನ 40 ಕೆರೆಗಳಿಗೆ ನೀರು ತುಂಬಿಸಲಾಗುವುದಲ್ಲದೆ, 30 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ.

ಇದೀಗ ಮುಖ್ಯ ಕಾಲುವೆ ಹಾಗೂ ಕೈಗಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮುಗಿದ ನಂತರ ಕಾಲುವೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದೆಂದು ಹನಗೋಡು ಹಾರಂಗಿ ಕಚೇರಿಯ ಎಇಇ ಅಶೋಕ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next