Advertisement
ಈ ಬಾರಿ ಕಡು ಬೇಸಿಗೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ನಿಂತು, ಗುಂಡಿಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರಿತ್ತು. ಅಣೆಕಟ್ಟೆಯ ಕಲ್ಲುಗಳು ಕಾಣಲಾರಂಭಿಸಿದ್ದವು. ಇದರಿಂದ ಬೇಸಿಗೆ ಬೆಳೆಗೆ ಹಾಗೂ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.
Related Articles
Advertisement
ನದಿಯ ಮುಖ್ಯ ಕಾಲುವೆಗೆ ನೀರು ಹರಿಸುವ ಗೇಟ್‌ಗೆ ಅಳವಡಿಸಿರುವ ಕಬ್ಬಿಣದ ತಡೆಗೋಡೆಗೆ ಸಾಕಷ್ಟು ಪ್ರಮಾಣದಲ್ಲಿ ಮರಗಳು ಸಿಲುಕಿಕೊಂಡಿದ್ದು, ನೀರಿನ ಸರಾಗ ಹರಿವಿಗೆ ಅಡಚಣೆಯಾಗಿದೆ.
ದುರಸ್ತಿ ನಂತರ ಕಾಲುವೆಗೆ ನೀರು:
ಹನಗೋಡು ಅಣೆಕಟ್ಟೆಯಿಂದ ತಾಲೂಕಿನ 40 ಕೆರೆಗಳಿಗೆ ನೀರು ತುಂಬಿಸಲಾಗುವುದಲ್ಲದೆ, 30 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ.
ಇದೀಗ ಮುಖ್ಯ ಕಾಲುವೆ ಹಾಗೂ ಕೈಗಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮುಗಿದ ನಂತರ ಕಾಲುವೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದೆಂದು ಹನಗೋಡು ಹಾರಂಗಿ ಕಚೇರಿಯ ಎಇಇ ಅಶೋಕ್ ತಿಳಿಸಿದ್ದಾರೆ.