ಹುಣಸೂರು: ಸಾಲಬಾಧೆಯಿಂದ ರೈತರೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮೂಕನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕು ಕಸಬಾ ಹೋಬಳಿಯ ಚನ್ನೇಗೌಡರ ಪುತ್ರ ರುದ್ರೇಗೌಡ(59) ಸಾವನ್ನಪ್ಪಿದವರು.ಹೆಂಡತಿ, ಮೂವರು ಮಕ್ಕಳಿದ್ದಾರೆ.
ರೈತ ರುದ್ರೇಗೌಡರಿಗೆ 3 ಎಕರೆ ಜಮೀನಿದ್ದು, ತಂಬಾಕು, ರಾಗಿ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಹುಣಸೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ 3 ಲಕ್ಷರೂ ಸಾಲ ಮಾಡಿದ್ದರು.ಅಲ್ಲದೆ ಗ್ರಾಮದಲ್ಲೂ ಸಹ ಕೈಸಾಲ ಮಾಡಿಕೊಂಡಿದ್ದರು.
ಕಳೆದ ಬಾರಿ ತಂಬಾಕಿಗೆ ನಿರೀಕ್ಷೆಯಂತೆ ದರ ಸಿಗಲಿಲ್ಲ.ಈ ಬಾರಿ ಮಳೆ ಇಲ್ಲದೆ ಬೆಳೆ ಕೈಸೆರದ ಬೀತಿಯಲ್ಲಿದ್ದ ತಮ್ಮ ತಂದೆ ಸಾಲ ತೀರಿಸಲಾಗದೆ ಆತಂಕದಿಂದ ಮನೆ ಮುಂಭಾಗದ ವಸಾರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪುತ್ರ ಶರತ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ಸ್ ಪೆಕ್ಟರ್ ದೆವೇಂದ್ರ ಪರಿಶೀಲನೆ ನಡೆಸಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರಶವವನ್ನು ವಾರಸು ದಾರರಿಗೆ ಒಪ್ಪಿಸಲಾಗಿದೆ.