Advertisement
ತಾಲೂಕಿನ ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿಯ ಉದ್ಯಾನದಂಚಿನ ಬ್ಯಾರಿಕೇಡ್ ದಾಟಿ ಹೊರ ಬಂದಿದ್ದ ಒಂಟಿಸಲಗವು ಭಾನುವಾರ ರಾತ್ರಿ ಚಿನ್ನದೊರೆ ಹಾಗೂ ಇವರ ಪುತ್ರ ವೆಂಕಟೇಶ್ ಅವರಿಗೆ ಸೇರಿದ ರಾಗಿ, ಮುಸುಕಿನಜೋಳ, ಮರಗೆಣಸು ಬೆಳೆಗಳನ್ನು ನಾಶ ಮಾಡಿದೆ. ನಂತರ ಜಮೀನಿನಲ್ಲಿ ವಾಸವಿದ್ದ ಗುಡಿಸಲು ಮೇಲೆ ದಾಳಿ ನಡೆಸಿದೆ. ಮನೆಯೊಳಗಿದ್ದವರು ಪ್ರಾಣ ರಕ್ಷಣೆಗಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದ ವರು ಸಹ ಜೋರಾಗಿ ಶಬ್ದ ಮಾಡಿದ್ದಾರೆ. ಈ ವೇಳೆ ಮನೆಯ ಒಪ್ಪಾರನ್ನು ಭಾಗಶಃ ಕೆಡವಿ ಅಲ್ಲಿಂದ ಪೇರಿ ಕಿತ್ತಿದೆ. ಅಂಗಳದಲ್ಲಿ ಡ್ರಮ್‌ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಕಾಡಿನತ್ತ ಹೋಗಿದ್ದರಿಂದ ಮನೆಯೊಳಗಿದ್ದವರು ಆನೆ ದಾಳಿಯಿಂದ ಪಾರಾಗಿದ್ದಾರೆ.
ಕೆಲ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಕಾಟವಿರಲಿಲ್ಲ. ವಾರದಿಂದ ತಟ್ಟೆಹಳ್ಳ ಪಾರೆ ಹಾಗೂ ಕೂಟದ ಕಡ ಭಾಗದಿಂದ ರೈಲ್ವೆ ಬ್ಯಾರಿಕೇಡ್ ಬ್ಯಾರಿಕೇಡ್ ದಾಟಿ ಹೊರಬಂದು ರೈತರ ಬೆಳೆ ನಾಶಪಡಿಸುತ್ತಿವೆ. ಹೆಚ್ಚಿನ ಸಿಬಂದಿ ನೇಮಿಸಲು ಆಗ್ರಹ
ಕೂಡಲೇ ಆರಣ್ಯ ಇಲಾಖೆಯವರು ಈ ಭಾಗಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕು. ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್, ರೈತ ಮುಖಂಡರಾದ ಜಾನ್ಸನ್, ಸ್ವಾಮಿಗೌಡ ಹಾಗೂ ಈಶ್ವರ್ ಆಗ್ರಹಿಸಿದ್ದಾರೆ.
Related Articles
Advertisement