Advertisement
ತಾಲೂಕಿನ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ವಸತಿ ಮಂಜೂರು ಆದೇಶ ಪತ್ರ, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್‌ಕಾರ್ಡ್, ಮಾಶಾಸನ ಆದೇಶ ಪತ್ರಗಳನ್ನು ಆದಿವಾಸಿಗಳಿಗೆ ವಿತರಿಸಿ ಮಾತನಾಡಿ ಈ ಕಾರ್ಯಕ್ರಮಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನವಿಲ್ಲ, ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಬಡವರಿಗಾಗಿ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ನಿಗದಿತ ವೇಳೆಯಲ್ಲೇ ಅವರ ಮನೆಬಾಗಿಲಿಗೆ ತಲುಪಿಸಬಹುದಾಗಿದ್ದು, ಇದನ್ನು ಮನಗಂಡ ಸರಕಾರ ಯೋಜನೆಯನ್ನು ಜಾರಿಗೊಳಿಸಿದ್ದು, ಇಂದು ಸುಮಾರು 250 ಮಂದಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಮೂರು ಘಟಕಗಳಲ್ಲಿ ಅಂಗನವಾಡಿ ಕಟ್ಟಡಕ್ಕೆ ಮನವಿ ಮಾಡಿದ್ದು, ಇದೇ ಕಾರ್ಯಕ್ರಮದಲ್ಲಿ ಇಂದು ತಲಾ ಹತ್ತು ಲಕ್ಷ ರೂ ವೆಚ್ಚದಲ್ಲಿ ಮೂರು ಅಂಗನವಾಡಿ ಕಟ್ಟಡ ನಿರ್ಮಾನಕ್ಕೆ ಚಾಲನೆ ನೀಡಲಾಗುತ್ತಿದೆ.
Related Articles
Advertisement
ದೊಡ್ಡಹೆಜ್ಜೂರು ಗ್ರಾ.ಪಂ.ಅಧ್ಯಕ್ಷ ಮುದಗನೂರು ಸುಭಾಷ್,ಗುರುಪುರ ಗ್ರಾ.ಪಂ. ಅಧ್ಯಕ್ಷೆ ರಾಧಮ್ಮನಾಗನಾಯಕ, ತಾಪಂ.ಇಓ ಮನುಬಿ.ಕೆ, ತಹಶೀಲ್ದಾರ್ ಡಾ.ಅಶೋಕ್, ಜಿಲ್ಲಾ ಐಟಿಡಿಪಿ ಆಧಿಕಾರಿ ಪ್ರಭಾಅರಸ್, ತಾಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿ ಬಸವರಾಜ್, ಸಂತೋಷ್‌ಕುಮಾರ್, ವೆಂಕಟೇಶ್, ವಸತಿ ನೋಡಲ್ ಅಧಿಕಾರಿ ಲೋಕೇಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
250 ಮಂದಿಗೆ ಸೌಲಭ್ಯ ವಿತರಣೆಇದೇ ಕಾರ್ಯಕ್ರದಲ್ಲಿ ೪ ಸ್ಮಶಾನ ಹಸ್ತಾಂತರ, ಆಶ್ರಮ ಶಾಲೆ ದಾಖಲೆ ಹಸ್ತಾಂತರ,ಆಯುಷ್ ಮಾನ್ ಭಾರತ್ ಕಾರ್ಡ್-೧೩೦, ವಿವಿಧ ಮಾಶಾಸನ-೧೮, ಬ್ಯಾಂಕ್ ಖಾತೆ ಕಿಟ್-೨೯, ಆದಾಯ ರ್ದರಡೀಕರಣ-೫, ಜಾತಿ ದೃಡೀಕರಣ-೫, ಆಧಾರ್ ಕಾರ್ಡ್ ನೊಂದಣಿ-೮೪, ಮತದಾರರ ಗುರುತಿನ ಚೀಟಿ ಹೊಸ ಸೇರ್ಪಡೆ-೨೮ಗೊಳಿಸಲಾಯಿತು.