ಹುಣಸೂರು: ಚುನಾವಣ ಫಲಿತಾಂಶ ಹೊರಬೀಳಲು ಇನ್ನು ಒಂದು ದಿನ ಬಾಕಿ ಇರುವಾಗ ಬೆಟ್ಟಿಂಗ್ ಕಟ್ಟಲು ಯುವಕರು ಜನರನ್ನು ಕರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದ್ದ,. ಜೆಡಿಎಸ್ ಪರವಾಗಿ ಬೆಟ್ಟಿಂಗ್ ಕಟ್ಟಲು ಅಲ್ಲಲ್ಲಿ ಯುವಕರು ಉತ್ಸುಕರಾಗಿದ್ದು. ನಗರದ ಒಂಟೆಪಾಳ್ಯಬೊರೆ ಬಡಾವಣೆಯಲ್ಲಿ ಯುವಕನೊಬ್ಬ 10 ಸಾವಿರಕ್ಕೆ ಒಂದು ಲಕ್ಷ ಎನ್ನುತ್ತಿದ್ದರೆ.ಮತ್ತೊಬ್ಬ ಯುವಕ 20 ಸಾವಿರ ಸೋಡಿ ಎಂದು ಕೂಗಿ ತಮ್ಮ ಅಭ್ಯರ್ಥಿಪರ ಘೋಷಣೆ ಕೂಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.