Advertisement

Viral video ನೋಡಿ; ಏಕಾಏಕಿ ಹಾರಿದ ಕೋಲೆ ಬಸವ: ಸ್ಕೂಟರ್ ಸವಾರ ಪಾರು

04:48 PM Apr 05, 2024 | Team Udayavani |

ಬೆಂಗಳೂರು: ನಗರದಲ್ಲಿ ನಡೆದ ಅಪಘಾತವೊಂದರ ವಿಡಿಯೋ ರಾಷ್ಟ್ರದೆಲ್ಲೆಡೆ ವೈರಲ್ ಆಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ನ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಸ್ಕೂಟರ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ರಸ್ತೆಯಲ್ಲಿ ಕೋಲೆ ಬಸವನನ್ನು ಕರೆದುಕೊಂಡು ಮಹಿಳೆಯೊಬ್ಬರು ತನ್ನ ಪಾಡಿದೆ ಹಾಡುತ್ತಿದ್ದರು. ವಿರುದ್ಧ ದಿಕ್ಕಿನಿಂದ ಸ್ಕೂಟರ್ ಸವಾರ ಸಾಗುತ್ತಿದ್ದ. ಪಕ್ಕದಲ್ಲೇ ಲಾರಿಯು ಬರುತ್ತಿತ್ತು. ಏಕಾಏಕಿ ಕೋಲೆ ಬಸವ ಸ್ಕೂಟರ್ ಸವಾರನ ಮೇಲೆ ಹಾರಿಯೇ ಬಿಟ್ಟಿದೆ. ಸವಾರ ಕೆಳಕ್ಕೆ ಬಿದ್ದಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿದಿದೆ.ಲಾರಿ ಚಾಲಕ ಬ್ರೇಕ್ ಹಾಕದೆ ಇದ್ದಿದ್ದರೆ ಸ್ಕೂಟರ್ ಸವಾರ ಹಿಂಬದಿಯ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಇತ್ತು. ಅದೃಷ್ಟವಶಾತ್ ಸ್ಕೂಟರ್ ಸವಾರ ಘಟನೆ ನಡೆದ ಕೂಡಲೇ ಎದ್ದು ನಿಂತು ನೋಡಿದ್ದಾನೆ.

ಸದ್ಯ ವಿಡಿಯೋ ವೈರಲ್ ಆಗಿದ್ದು ಆನ್ ಲೈನ್ ನಲ್ಲಿ ವೀಕ್ಷಕರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next