Advertisement

ಹುಣಸೂರು : ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕೇವಲ ಊಹಾಪೋಹ

09:43 AM Sep 29, 2019 | sudhir |

ಮೈಸೂರು: ಬಿಜೆಪಿ ನಗರಾಧ್ಯಕ್ಷ ಡಾ. ಬಿಎಚ್ ಮಂಜುನಾಥ್ ಹುಣಸೂರು ಅಭ್ಯರ್ಥಿ ಎಂದು ಕೇಳಿಬರುತ್ತಿದ್ದ ವಿಚಾರಕ್ಕೆ ಎಚ್.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.

Advertisement

ಬೈ ಎಲೆಕ್ಷನ್ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಮಂಜುನಾಥ್ ಹುಣಸೂರಿನ ಬಿಜೆಪಿ ಅಭ್ಯರ್ಥಿ ಅನ್ನೋದು ಊಹಾಪೋಹ ಅಷ್ಟೇ ಇದಕ್ಕೆ ಜನತೆ ಕಿವಿಗೊಡಬಾರದು ಎಂದು ವಿಶ್ವನಾಥ್ ಹೇಳಿದ್ದಾರೆ .

ಈ ಹಿಂದೆ ಬೈ ಎಲೆಕ್ಷನ್ ಡೆಟ್ ಫಿಕ್ಸ್ ಆಗಿ ಮತ್ತೆ ಡಿಸೆಂಬರ್ ೫ ಮುಂದೂಡಲಾಗಿದೆ. ಸದ್ಯಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಈಗ ಘೋಷಣೆಯಾಗಿರುವ ಉಪಚುನಾವಣೆಯೂ ಮುಂದೂಡಬಹುದು?

ಸುಪ್ರೀಂಕೋರ್ಟ್ ನಲ್ಲಿರುವ ನಮ್ಮ ಅರ್ಜಿ ವಿಚಾರವಾಗಿ ಐತಿಹಾಸಿಕ ತೀರ್ಪು ಬರಲಿದೆ. ಈಗೀನ ಪೀಠದಿಂದ ಸಂವಿಧಾನ ಪೀಠಕ್ಕೂ ನಮ್ಮ ಕೇಸ್ ರವಾನೆಯಾಗಬಹುದು.

ಪರಸ್ಥಿತಿ ಹಿಗಿರುವಾಗ ಯಾರೋ ಹುಣಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಘೋಷಣೆಯಾಗಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಕೇವಲ ಗೊಂದಲ ಸೃಷ್ಟಿಸುವ ಕೆಲಸ‌, ಯಾವ ಶಾಸಕನೂ ತಾನು ಗೆದ್ದ ಕ್ಷೇತ್ರವನ್ನ ಬೇರೆ ಯಾರಿಗಗೂ ಬಿಟ್ಟು ಕೊಡುವುದಿಲ್ಲ. ಆ ಕ್ಷೇತ್ರ ಆ ಶಾಸಕನ ಜೀವನವಾಗಿರುತ್ತದೆ.

Advertisement

ಚುನಾವಣೆ ನಡೆದರೆ ನಾನೇ ಸ್ಪರ್ಧೆ ಮಾಡುತ್ತೇನೆ ಈ ವಿಚಾರವಾಗಿ ತೀರ್ಮಾನವು ಮಾಡಿಕೊಂಡಿದ್ದೇನೆ ಬಿಜೆಪಿ ಹೈಕಮಾಂಡ್ ಬಹಳ ಗಟ್ಟಿಯಾಗಿದೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ ಸಿಎಂ ಭೇಟಿ ವೇಳೆ ನಾನು ಚುನಾವಣೆ ಬಗ್ಗೆ ಚರ್ಚೆಯೇ ಮಾಡಿಲ್ಲ
ಇನ್ನು ಸಿಎಂ ನನ್ನನ್ನ ಮನವೋಲಿಸುವ ಪ್ರಶ್ನೆ ಎಲ್ಲಿಂದ ಬಂತು. ಮೊನ್ನೆ ಸಿಎಂ ಭೇಟಿ ಮಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತ್ನಾಡಿದ್ದೆನೆ ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next