Advertisement
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ಲೋಕೇಶ್ (47) ಮೃತಪಟ್ಟವರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Related Articles
Advertisement
ಹನಗೋಡಿನಲ್ಲಿ ನ.27ರಂದು ನಡೆದಿದ್ದ ಇದೇ ಮಾದರಿ ಅಪಘಾತದಲ್ಲಿ ಹನಗೋಡಿನ ಎಚ್.ಎಸ್.ಮುರಳೀಧರ್ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅದೇ ಮಾದರಿ ಮತ್ತೊಂದು ಟ್ರ್ಯಾಕ್ಟರ್ ಅಪಘಾತ ನಡೆದಿರುವುದು ವಿಷಾದದ ಸಂಗತಿ.
ಸಾರ್ವಜನಿಕರ ಆಕ್ರೋಶ:
ಟ್ರ್ಯಾಕ್ಟರ್ಗಳ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಹಾಗೂ ಗಾಯಗೊಳ್ಳುವ ಬೈಕ್ ಸವಾರರ ಸಂಖ್ಯೆ ಹೆಚ್ಚುತ್ತಿವೆ. ಆದರೆ ಟ್ರ್ಯಾಕ್ಟರ್ ಮಾಲಿಕರು, ಚಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕ್ರಮಕ್ಕೆ ಮುಂದಾಗದಿರುವುದರಿಂದಾಗಿ ತಾಲೂಕಿನಲ್ಲಿ ವಿಮೆ ಇಲ್ಲದ, ಚಾಲನ ಪರವಾನಗಿ ಇಲ್ಲದೆ ಟ್ರ್ಯಾಕ್ಟರ್ಗಳ ಚಾಲಕರು ಮನಸೋ ಇಚ್ಚೆ ಚಾಲನೆ ಮಾಡುತ್ತಿದ್ದು, ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯ ಪಡಿಸಿ, ಇನ್ನಾದರೂ ಸಮರ್ಪಕ ದಾಖಲಾತಿ ಇಲ್ಲದ ಟ್ರ್ಯಾಕ್ಟರ್ ಹಾಗೂ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.