Advertisement

Hunsur: ಟ್ರ್ಯಾಕ್ಟರ್‌ ಚಾಲಕರ ಪೈಪೋಟಿಗೆ ಬೈಕ್ ಸವಾರ ಬಲಿ; 15 ದಿನಗಳ ಅಂತರದಲ್ಲಿ 2ನೇ ಅಪಘಾತ

08:21 AM Dec 12, 2024 | Team Udayavani |

ಹುಣಸೂರು: ತಾಲೂಕಿನ ಹನಗೋಡಿನಲ್ಲಿ 15 ದಿನಗಳ ಅಂತರದಲ್ಲಿ ಟ್ರ್ಯಾಕ್ಟರ್‌ ಚಾಲಕನ ಅಜಾಗರೂಕತೆಯ ಚಾಲನೆಗೆ ಮತ್ತೊರ್ವ ಬಲಿಯಾಗಿರುವ ಘಟನೆ ಡಿ.11ರ ಬುಧವಾರ ರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ಲೋಕೇಶ್ (47) ಮೃತಪಟ್ಟವರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಭಾರತವಾಡಿಯಿಂದ ಹನಗೋಡು ಕಡೆಗೆ ಸ್ವಚ್ಛಗೊಳಿಸಲು ಶುಂಠಿಯನ್ನು ತುಂಬಿಕೊಂಡು ಪೈಪೋಟಿಯಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್‌ಗಳು ಹಾಗೂ ಹನಗೋಡಿನಿಂದ ತನ್ನ ಬೈಕಿನಲ್ಲಿ ಹಿಂಡಗುಡ್ಲು ಗ್ರಾಮಕ್ಕೆ ತೆರಳುತ್ತಿದ್ದ ಲೋಕೇಶ್ ಅವರಿಗೆ ಡಿಕ್ಕಿಯಾಗಿದೆ.

ಟ್ರ್ಯಾಕ್ಟರ್‌ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸವಾರ ಲೋಕೇಶ್‌ನನ್ನು ಹನಗೋಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಇನ್ಸ್ ಪೆಕ್ಟರ್ ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಹನಗೋಡಿನಲ್ಲಿ ನ.27ರಂದು ನಡೆದಿದ್ದ ಇದೇ ಮಾದರಿ ಅಪಘಾತದಲ್ಲಿ ಹನಗೋಡಿನ ಎಚ್.ಎಸ್.ಮುರಳೀಧರ್ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅದೇ ಮಾದರಿ ಮತ್ತೊಂದು ಟ್ರ್ಯಾಕ್ಟರ್‌ ಅಪಘಾತ ನಡೆದಿರುವುದು ವಿಷಾದದ ಸಂಗತಿ.

ಸಾರ್ವಜನಿಕರ ಆಕ್ರೋಶ:

ಟ್ರ್ಯಾಕ್ಟರ್‌ಗಳ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಹಾಗೂ ಗಾಯಗೊಳ್ಳುವ ಬೈಕ್ ಸವಾರರ ಸಂಖ್ಯೆ ಹೆಚ್ಚುತ್ತಿವೆ. ಆದರೆ ಟ್ರ್ಯಾಕ್ಟರ್‌ ಮಾಲಿಕರು, ಚಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕ್ರಮಕ್ಕೆ ಮುಂದಾಗದಿರುವುದರಿಂದಾಗಿ ತಾಲೂಕಿನಲ್ಲಿ ವಿಮೆ ಇಲ್ಲದ, ಚಾಲನ ಪರವಾನಗಿ ಇಲ್ಲದೆ ಟ್ರ್ಯಾಕ್ಟರ್‌ಗಳ ಚಾಲಕರು ಮನಸೋ ಇಚ್ಚೆ ಚಾಲನೆ ಮಾಡುತ್ತಿದ್ದು, ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯ ಪಡಿಸಿ, ಇನ್ನಾದರೂ ಸಮರ್ಪಕ ದಾಖಲಾತಿ ಇಲ್ಲದ ಟ್ರ್ಯಾಕ್ಟರ್‌ ಹಾಗೂ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next