Advertisement
ಹುಣಸೂರು ತಾಲೂಕಿನ ಹೆಗ್ಗಂದೂರಿನ ಕಪನಯ್ಯ-ಪ್ರೇಮಾರ ಪುತ್ರ ಎಚ್.ಕೆ.ಪ್ರಜ್ವಲ್ ಮೂರನೇ ವರ್ಷದ ವೈದ್ಯ ವಿದ್ಯಾರ್ಥಿಯಾಗಿದ್ದರೆ, ದೊಡ್ಡಹೆಜ್ಜೂರಿನ ಧರಣೇಶ್-ಶೋಭಾ ದಂಪತಿ ಪುತ್ರ ರಕ್ಷಿತ್‍ಡಿ.ಆಚಾರ್ ಮೊದಲ ವರ್ಷದ ವೈದ್ಯ ವಿದ್ಯಾರ್ಥಿಯಾಗಿದ್ದು. ಫೆ.11ರಂದು ಉಕ್ರೇನ್‍ಗೆ ತೆರಳಿದ್ದ. ಎಚ್.ಕೆ.ಪ್ರಜ್ವಲ್ ಉಕ್ರೇನ್‍ನ ಜಫ್ರಿಝಿಯಾ ವೈದ್ಯಕೀಯ ಮಹಾವಿದ್ಯಾಲಯದಲ್ಲೂ ಹಾಗೂ ರಕ್ಷಿತ್‍ಡಿ.ಆಚಾರ್ ವಲೆಕ್ಸಿವೈಕಾ ಕಾರ್‍ಕಿವ್ ಇಂಟರ್ ನ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.
Related Articles
Advertisement
ಶುಕ್ರವಾರ ರಾತ್ರಿ 12.30ರಲ್ಲಿ ತಾಯಿ ಪ್ರೇಮಾ ತಮ್ಮ ಪುತ್ರ ಪ್ರಜ್ವಲ್ ನೊಂದಿಗೆ ವಿಡಿಯೋ ಕಾಲ್ ಮಾಡಿದಾಗ ನಾವು ಬಂಕರ್ ನಲ್ಲಿದ್ದೇವೆ, ಕರೆಂಟ್ ಇಲ್ಲ. ಕತ್ತಲಿನಲ್ಲಿದ್ದೇವೆ. ಇಲ್ಲಿ ಮಾತನಾಡುವಂತಿಲ್ಲ. ಅಕ್ಕ-ಪಕ್ಕ ಬಾರೀ ಶಬ್ದ ಬರುತ್ತಿದೆ. ಊಟ-ತಿಂಡಿ ಸಿಗುತ್ತಿದೆ. ಇಂಟರ್‍ನೆಟ್ ಇಲ್ಲ. ಏನೇ ಇದ್ದರೂ ಮೆಸೇಜ್ ಮಾಡ್ತಿನಿ ಅಂತ ಮೆಲ್ಲಗೆ ಮಾತನಾಡಿ ಕರೆ ಕಟ್ ಮಾಡಿದ್ದಾನೆಂದು ಮಾಹಿತಿ ನೀಡಿದ್ದಾರೆ.
ಶಾಸಕ ಅಭಯ:
ಕಚೇರಿಯಿಂದಲೇ ಕರ್ನಾಟಕ ಮುಖ್ಯ ಕಾರ್ಯದರ್ಶಿ ರವಿಕುಮಾರ್‍ರಿಗೆ ಕರೆ ಮಾಡಿದ ಶಾಸಕ ಮಂಜುನಾಥರು ಎಚ್.ಕೆ.ಪ್ರಜ್ವಲ್ ಬಗ್ಗೆ ಮಾಹಿತಿ ನೀಡಿ, ಸುರಕ್ಷಿತವಾಗಿ ವಾಪಾಸ್ ಬರಲು ನೆರವಾಗುವಂತೆ ಮಾಡಿದ ಮನವಿಗೆ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಭಾರತೀಯ ರಾಯಬಾರಿ ಕಚೇರಿ ಶ್ರಮಿಸುತ್ತಿದೆ. ಈತನ ಬಗ್ಗೆಯೂ ಮಾಹಿತಿ ರವಾನಿಸುವುದಾಗಿ ತಿಳಿಸಿ ಸುರಕ್ಷಿತವಾಗಿ ಕರೆತರಲು ಸರಕಾರ ಕ್ರಮವಹಿಸಲಿದೆ ಎಂದ ಶಾಸಕರು ಪೋಷಕರನ್ನು ಸಮಾದಾನ ಪಡಿಸಿದರು.
ಫೆ.11ರಂದು ಉಕ್ರೇನ್‍ಗೆ ತೆರಳಿದ್ದ ರಕ್ಷಿತ್ ಡಿ.ಆಚಾರ್:
ಇದೇ ಫೆ.11ರಂದು ವೈದ್ಯನಾಗುವ ಕನಸು ಹೊತ್ತು ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ ದೂರದ ಕಾರ್ಕಿ ಇಂಟರ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ
ನಿಕಟ ಸಂಪರ್ಕದಲ್ಲಿ ರಕ್ಷಿತ್:
ಎಂ.ಬಿ.ಬಿ.ಎಸ್.ಗೆ ದಾಖಲಾಗಿದ್ದ 13 ದಿನಗಳಲ್ಲೇ ರಷ್ಯಾವು ಉಕ್ರೇನ್ ಮೇಲಿನ ಯುದ್ದ ಭೀತಿಯಲ್ಲಿ ಸಿಲುಕಿಕೊಂಡಿದ್ದು, ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶನಿವಾರ ಸಂಜೆ 5ರ ವೇಳೆಯಲ್ಲೂ ಪುತ್ರ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ಭಾರತ ರಾಯಭಾರಿ ಕಚೇರಿಯು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮರಳುವ ವಿಶ್ವಾಸದಲ್ಲಿದ್ದಾನೆ. ಈತನೊಂದಿಗೆ ತಮಿಳುನಾಡಿನ ಇಬ್ಬರು, ಚಿಕ್ಕಮಗಳೂರಿನ ಇಬ್ಬರು ಜೊತೆಗಿದ್ದಾರೆ. ಈಗಾಗಲೆ ಸರಕಾರ ಸೂಚಿಸಿರುವಂತೆ ನೊಂದಾಯಿಸಲಾಗಿದೆ ಎಂದು ಧರಣೇಶ್ ಉದಯವಾಣಿಗೆ ತಿಳಿಸಿದರು.
ಕಣ್ಣೀರಿಟ್ಟ ಕುಟುಂಬಸ್ಥರು:
ನನ್ನ ಮಗ ಪ್ರಜ್ವಲ್ ಸಂಕಷ್ಟದಲ್ಲಿದ್ದಾನೆ, ನಿದ್ದೆನೂ ಬರುತ್ತಿಲ್ಲ. ಊಟನೂ ಸೇರ್ತಿಲ್ಲಾ. ಅಕ್ಕಪಕ್ಕದಲ್ಲೇ ಭಾರೀ ಶಬ್ದ ಕೇಳುತ್ತಂತೆ ಊಟ ತಿಂಡಿಗೆ ಏನ್ ಮಾಡ್ತಿದ್ದನೋ ಗೊತ್ತಿಲ್ಲವೆಂದು ಕಣ್ಣೀರಿಟ್ಟ ತಾಯಿ ಪ್ರೇಮಾ, ಭಯವಾಗ್ತಿದೆ. ಅಲ್ಲಿ ಹೊರಗೆ ಹೋಗುವಂತಿಲ್ಲ, ಏನೋ ಹೇಗೋ, ನನ್ನ ಮಗ ವಾಪಾಸ್ ಬರಂಗೆ ಮಾಡಿರೆಂದು ಅವಲತ್ತುಗೊಂಡರು. ಸಹೋದರ ಕೀರ್ತಿ ಅಣ್ಣನ ಜೊತೆ ಮಾತಾಡಂಗಿಲ್ಲ. ಬರೀ ಮೆಸೇಜ್ ಬರುತ್ತಿದೆಯಷ್ಟೆ, ಯಾವಾಗ ಮೆಸೇಜ್ ಮಾಡ್ತಾನೆ ಅಂತ ಕಾಯುವಂತಾಗಿದೆ ಎಂದರು. ಮೈಸೂರಿನ ಗಜಮುಖ ಸೆಕ್ಯುರಿಟಿಯಲ್ಲಿ ಸೂಪರ್ ವೈಸರ್ ಆಗಿರುವ ತಂದೆ, ಕಪನಯ್ಯ ಕೋವಿಡ್ ಸಂದರ್ಭದಲ್ಲಿ ವಾಪಾಸ್ ಬಂದ ಅವನಿಗೆ ಆನ್ ಲೈನ್ ಕ್ಲಾಸ್ ನಡಿತಿತ್ತು. ಕಳೆದ ನ.28ರಂದು ಉಕ್ರೇನ್‍ಗೆ ವಾಪಸ್ ತೆರಳಿದ್ದ, ಇದೀಗ ಕಷ್ಟಕ್ಕೆ ಸಿಲುಕಿದ್ದಾನೆ ಎಂದು ದುಗುಡ ವ್ಯಕ್ತಪಡಿಸಿದರು.