Advertisement
ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿ ಮೂಸಾರವರ ಪುತ್ರ ಬಂಧಿತ ರವೂಫ್ ಆರೋಪಿ.
ಆರೋಪಿ ರವೂಫ್ ಸಾಲ ಕೊಡಿಸುವ ವ್ಯವಹಾರ ನಡೆಸುತ್ತಿದ್ದು, ಮೈಸೂರಿನ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಪರಿಚಯ ಮಾಡಿಕೊಂಡು ತಾನು ಅವಿವಾಹಿತನಾಗಿದ್ದು, ವಿವಾಹವಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಸುತ್ತಾಡಿಕೊಂಡಿದ್ದ. ಈ ವೇಳೆ ಆಕೆಯ ಒಡವೆಗಳನ್ನು ಗಿರವಿ ಇಟ್ಟಿದ್ದ. ಕಳೆದ ನಾಲ್ಕು ದಿನಗಳ ಹಿಂದೆ ಹುಣಸೂರಿಗೆ ಆಗಮಿಸಿದ ಇಬ್ಬರು ಲಾಡ್ಜ್ನಲ್ಲಿ ತಂಗಿದ್ದರು. ಈ ವೇಳೆ ಆತನ ಬ್ಯಾಗಿನಲ್ಲಿದ್ದ ಆಧಾರ್ ಕಾರ್ಡ್ ಮತ್ತಿತರ ದಾಖಲಾತಿಗಳಲ್ಲಿ ಈತನ ಹೆಸರು ಅನ್ಯಧರ್ಮಿಯನ ಹೆಸರಿನಲ್ಲಿರುವುದನ್ನು ಕಂಡ ಮಹಿಳೆ ಅನುಮಾನಗೊಂಡು ಪರಿಶೀಲಿಸಿದ ವೇಳೆ ಈತ ಅನ್ಯಧರ್ಮಿಯ ಹಾಗೂ ವಿವಾಹಿತನೆಂದು ತಿಳಿದು ವಿರೋಧ ವ್ಯಕ್ತಪಡಿಸಿದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆಂದು ಸಂತ್ರಸ್ತೆ ಮಹಿಳೆ ಹುಣಸೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Related Articles
Advertisement