Advertisement
ನಗರ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು? :
Related Articles
Advertisement
ನಗರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆಯಲ್ಲಾ? :
-ನಿಜ, ಕಳೆದ ಒಂದೂವರೆ ವರ್ಷದಿಂದ ನಗರ ಸಭೆಗೆ ಕಾಯಂ ಪೌರಾಯುಕ್ತರಿಲ್ಲ. ಜೊತೆಗೆ 9 ತಿಂಗಳಿನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದರೂ ಅಧ್ಯಕ್ಷರ ಆಯ್ಕೆ ನಡೆಯದೇ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಇದೀಗ ತಾವು ಆಯ್ಕೆಯಾಗಿದ್ದು, ಈಗಾಗಲೇ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಸಂಸದರಿಗೂ ಕಾಯಂ ಪೌರಾಯುಕ್ತರ ನೇಮಕಕ್ಕೆ ಮನವಿ ಮಾಡಲಾಗಿದೆ. ಶೀಘ್ರ ನಗರಾಭಿವೃದ್ಧಿ ಸಚಿವರ ಬಳಿ ಎಲ್ಲಾ ಸದಸ್ಯರ ನಿಯೋಗ ತೆರಳಿ ಕಾಯಂ ಪೌರಾಯುಕ್ತರ ನೇಮ ಕಕ್ಕೆ ಕ್ರಮವಹಿಸಿ, ನನೆಗುದಿಗೆ ಬಿದ್ದಿರುವ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಶ್ರಮಿಸುವೆ.
ವಾರ್ಡ್‌ಗಳಿಗೆ ಮೂಲಭೂತ ಸೌಕರ್ಯಕ್ಕೆ ಯಾವ ಕ್ರಮ ವಹಿಸುವಿರಿ? :
-ನಗರದ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಅನುದಾನದ ಕೊರತೆ ಇದೆ. ಶೀಘ್ರ ಅಧಿಕಾರಿ ಗಳೊಂದಿಗೆ ವಾರ್ಡ್‌ಗಳಿಗೆ ತೆರಳಿ ಕಂದಾಯ ಅದಾಲತ್ ನಡೆಸಿ ತೆರಿಗೆಯಿಂದ ಬರುವ ಹಣ ಹಾಗೂ ಬಾಕಿ ಉಳಿದಿರುವ ನಗರೋತ್ಥಾನ ಅನುದಾನ ಜೊತೆಗೆ ಸರ್ಕಾರದ ವಿವಿಧ ಯೋಜನೆ ಗಳ ಅನುದಾನಕ್ಕೆ ಮೂವರು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸುವೆ. ನಗರದ ಬಹುತೇಕ ವಾರ್ಡ್ ಅಕ್ರಮವೆಂಬ ಹಣೆಪಟ್ಟಿ ಇದೆ. ಸಕ್ರಮ ಖಾತೆ ಮಾಡಿದರೆ ತೆರಿಗೆ ಹೆಚ್ಚಳವಾಗಲಿದೆ ಇದನ್ನು ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತರಲಾಗುವುದು.
ನಿಮ್ಮ ವಾರ್ಡ್‌ನ ಮತದಾರರಿಗೆ ಕೊಡುಗೆ ಏನು? :
-ನನ್ನ ಪತಿ ರಾಘು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದನ್ನು ವರಿಷ್ಠರು ಗುರುತಿಸಿ ಟಿಕೆಟ್ ನೀಡಿದ್ದಲ್ಲದೆ, ಮತದಾರರು ಕೂಡ ಕೈ ಹಿಡಿದಿದ್ದಾರೆ. ವಾರ್ಡ್‌ನಲ್ಲಿ ಕುಡಿವ ನೀರಿನಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇನೆ. ಇದನ್ನು ಪರಿಹರಿಸಲು ಗಮನ ಹರಿಸುವೆ.
ಪರಿಸರ, ಸ್ವಚ್ಛತೆ, ನಗರ ಸೌಂದಯಕ್ಕೆಕ್ರಮ ಏನು? :
-ನಾನು ಈ ನಗರಕ್ಕೆ ಹೊಸಬಳೇನೂ ಅಲ್ಲ. ಇಲ್ಲಿನ ಸೊಸೆ ಜೊತೆಗೆ ಮಗಳು ಸಹ.ನಗರದ ಮಧ್ಯ ಭಾಗದಲ್ಲಿ ಹರಿಯುವ ಜೀವನದಿ ಲಕ್ಷ್ಮಣ ತೀರ್ಥಕ್ಕೆ ಸೇರುವ ಒಳಚರಂಡಿ ನೀರಿನ ದುರ್ವಾಸನೆ, ನದಿಯ ಅವಸ್ಥೆಯನ್ನು ಕಂಡು ಬೇಸತ್ತಿದ್ದೇನೆ. ಇದಕ್ಕೊಂದು ಕಾಯಕಲ್ಪ ನೀಡಲು ಶಾಸಕ, ಸಂಸದ, ಎಂಎಲ್‌ಸಿ ಸಾಧ್ಯವಾದಲ್ಲಿ ಮುಖ್ಯಮಂತ್ರಿಗಳ ಬಳಿಗೆ ಅಧಿಕಾರಿ – ಜನಪ್ರತಿ ನಿಧಿಗಳ ನಿಯೋಗ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಚಿಂತಿಸಿದ್ದೇನೆ.
ಮಹಿಳಾ ಸದಸ್ಯರ ಪತಿಯರೇ ಅಧಿಕಾರ ನಡೆಸುತ್ತಾರೆಂಬ ಅಪವಾದ ಇದೆಯಲ್ಲಾ? :
ನಾನು ಅಧಿಕಾರಕ್ಕೆ ಹೊಸಬಳಿರಬಹುದು. ಆದರೆ ನಾನು ಪದವಿವರೆಗೆ ವ್ಯಾಸಂಗ ಮಾಡಿದ್ದೇನೆ. ಕಾನೂನು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಅಪವಾದದ ಹೊರತಾಗಿ ಆಡಳಿತ ನಡೆಸುತ್ತೇನೆ. ಯಾರ ಪ್ರಭಾವ, ಹಸ್ತಕ್ಷೇಪಕ್ಕೂ ಅವಕಾಶ ನೀಡುವುದಿಲ್ಲ. ಪಾರದರ್ಶಕ ಆಡಳಿತ ನೀಡುವೆ. ಅಧಿಕಾರಿಗಳು ಹಾಗೂಸದಸ್ಯರನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವೆ.
ಸಂಪತ್ ಕುಮಾರ್