Advertisement

ಇದು ಪಬ್ಲಿಕ್‌ ಹೋಟೆಲ್‌!

08:15 AM Mar 06, 2018 | |

ಅಲಪ್ಪುಳ: ಕೇರಳದಲ್ಲಿ 30 ವರ್ಷ ವಯಸ್ಸಿನ ಆದಿವಾಸಿ ವ್ಯಕ್ತಿ ಹಸಿವು ತಾಳಲಾರದೆ ಅಂಗಡಿಯಲ್ಲಿ ಆಹಾರ ವಸ್ತು ಕದ್ದಿದ್ದಕ್ಕಾಗಿ ಆತನನ್ನು ಥಳಿಸಿ ಕೊಂದಿದ್ದ ಘಟನೆಯು, ದೇಶದಲ್ಲಿ ತಾಂಡವವಾಡುತ್ತಿರುವ ಹಸಿವಿನ ಭೀಕರತೆಯ ಜೊತೆಗೆ ಜನರ ಅಮಾನವೀಯತೆಯನ್ನೂ ಪ್ರದರ್ಶಿಸಿತ್ತು. ಇದೀಗ ಇದೇ ರಾಜ್ಯದ ಅಳಪ್ಪುಳದಲ್ಲಿ, ಹಸಿವು ಮಧು ಅಷ್ಟೇ ಅಲ್ಲ ಹಲವರ ಪ್ರಾಣಗಳನ್ನು ಸದ್ದಿಲ್ಲದೇ ಬಲಿ ಪಡೆಯುತ್ತಿದ್ದು, ಜನರು ಹಸಿವಿನಿಂದ ಕಂಗೆಡಬಾರದು ಎಂಬ ಕಾರಣದಿಂದ ಜನ ತಾವೇ ಸ್ವಇಚ್ಛೆಯಿಂದ ಕೇರಳವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.

Advertisement

ಇದಕ್ಕಾಗಿ ಅವರು ರೆಸ್ಟೊರೆಂಟ್‌ವೊಂದನ್ನು ಆರಂಭಿಸಿದ್ದಾರೆ. ಇದರ ಹೆಸರು “ಜನಕೀಯ ಭಕ್ಷಣಶಾಲಾ’. ಈ ಯೋಜನೆಯ ರೂವಾರಿ ಸ್ನೇಹಜನಲಂ ಎಂಬ ಸಿಪಿಎಂ ಸಹಭಾಗಿತ್ವದ ಎನ್‌ಜಿಒ. ಇದಕ್ಕೆ ಬೆಂಬಲವಾಗಿ ನಿಂತಿರುವವರು ಸ್ಥಳೀಯ ಶಾಸಕ, ಹಣಕಾಸು ಸಚಿವ ಥಾಮಸ್‌ ಐಸಾಕ್‌. ಈ ಹೋಟೆಲ್‌ಗ‌ಳಲ್ಲಿ ಹಣ ಪಡೆಯಲು ಕೌಂಟರ್‌ಗಳು ಇಲ್ಲ. ಕೌಂಟರ್‌ ಜಾಗದಲ್ಲಿ ಹುಂಡಿಗಳನ್ನು ಇರಿಸಲಾಗಿದೆ. ಜನರು ತಮ್ಮ ಮನಸ್ಸಿಗೆ ತಿಳಿದಷ್ಟು ಹಣವನ್ನು ಈ ಹುಂಡಿಗಳಲ್ಲಿ ಹಾಕಬಹುದು. ಈ ಹೋಟೆಲ್‌ ದಿನವೊಂದಕ್ಕೆ 2,000 ಜನರಿಗೆ ಅಡುಗೆ ತಯಾರಿಸಿ, ವಿತರಿಸುವ  ಸಾಮರ್ಥ್ಯ ಹೊಂದಿದೆ. ಇದನ್ನು 11.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಕೇರಳ ರಾಜ್ಯ ಹಣಕಾಸು ನಿಗಮವು ಆರ್ಥಿಕ ನೆರವು ನೀಡಿದೆ. ಈ ಹೋಟೆಲ್‌ ಹಿಂಭಾಗದಲ್ಲಿ 2.5 ಎಕರೆ ವಿಸ್ತೀಣ ಪ್ರದೇಶದಲ್ಲಿ ಸಾವಯವ ತರಕಾರಿ ತೋಟವನ್ನೂ ಆರಂಭಿಸಲಾಗಿದೆ. ಇಲ್ಲಿ ಜನರು ತರಕಾರಿಗಳನ್ನೂ ಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next