ಹಗ್ಗಜಗ್ಗಾಟ ಸ್ಪರ್ಧೆಯನ್ನು ನೋಡಿದ್ದೀರಿ. ಆದರೆ, ವಿಮಾನವನ್ನು ಎಳೆಯುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಅಮೆರಿಕದ ವರ್ಜೀನಿಯಾದ ಡಲ್ಲಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ವಿನೂತನ ಸ್ಪರ್ಧೆ ನಡೆದಿದೆ.
ಬರೋಬ್ಬರಿ 82 ಟನ್ ತೂಕದ ಪ್ರಯಾಣಿಕ ವಿಮಾನವನ್ನು ನೂರಾರು ಮಂದಿ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ತಲಾ 25 ಮಂದಿಯ 100ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಸ್ಪರ್ಧೆಯ ಮೂಲಕ ವರ್ಜೀನಿಯಾ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿದೆ. ವರ್ಷ ಪೂರ್ತಿ ವಿಶೇಷಚೇತನ ಮಕ್ಕಳು ಮತ್ತು ವಯಸ್ಕರಿಗೆ ತರಬೇತಿ ಮತ್ತು ಸ್ಪರ್ಧೆ ನಡೆಸುವುದು ಈ ಒಲಿಂಪಿಕ್ಸ್‌ನ ಗುರಿಯಾಗಿದೆ.
1968ರಲ್ಲಿ ಇದನ್ನು ಮೊದಲ ಬಾರಿಗೆ ಆರಂಭಿಸಲಾಯಿತು. “ಈ ವರ್ಷದ ಸ್ಪರ್ಧೆಯಲ್ಲಿ ದಾಖಲೆಯ 4,40,000 ಡಾಲರ್ ಸಂಗ್ರಹಿಸಲಾಗಿದೆ. 30 ವರ್ಷಗಳ ಹಿಂದೆ ಈ ಸ್ಪರ್ಧೆಯನ್ನು ಮೊದಲ ಬಾರಿಗೆ ಆರಂಭಿಸಲಾಯಿತು,’ ಎಂದು ಡಲ್ಲಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉಪಾಧ್ಯಕ್ಷ ರಿಚರ್ಡ್ ಗೋಲಿನೋವಿÕ$R ತಿಳಿಸಿದ್ದಾರೆ.