Advertisement

5 ವರ್ಷದ ಬಾಲಕಿಯ ರೇಪ್ & ಹತ್ಯೆ; ಕೇರಳದಲ್ಲಿ ವ್ಯಾಪಕ ಆಕ್ರೋಶ

06:34 PM Jul 30, 2023 | Team Udayavani |

ಕೊಚ್ಚಿ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆಗೈದ ಹೃದಯ ವಿದ್ರಾವಕ ಘಟನೆಯ ನಂತರ, ನೂರಾರು ಜನರು ಭಾನುವಾರ ಶಾಲೆಯ ಬಳಿಗೆ ಬಂದು ಅಂತಿಮ ನಮನ ಸಲ್ಲಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ, ವಿಶೇಷವಾಗಿ ಮರಣದಂಡನೆ ನೀಡುವಂತೆ ಒತ್ತಾಯಿಸಿದರು.

Advertisement

ಸಮಾಜದ ಎಲ್ಲಾ ವರ್ಗದ ಜನರು, ಎಲ್ಲಾ ವಯೋಮಾನದವರು ಶಾಲೆಯಲ್ಲಿ ವಿದ್ಯಾರ್ಥಿನಿಗೆ ಅಂತಿಮ ಗೌರವ ಸಲ್ಲಿಸಲು ಆಗಮಿಸಿದ್ದರು.

ಶುಕ್ರವಾರ, ಬಾಲಕಿಯನ್ನು ಅಪಹರಿಸಿ, ಕ್ರೂರವಾಗಿ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ. ಬಿಹಾರಿಂದ ವಲಸೆ ಬಂದಿರುವ ಮಗುವಿನ ಕುಟುಂಬ ವಾಸವಿರುವ ಕಟ್ಟಡದಲ್ಲೇ ವಾಸಿಸುತ್ತಿದ್ದ ಬಿಹಾರದಿಂದಲೇ ಬಂದ ವಲಸೆ ಕಾರ್ಮಿಕ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಶನಿವಾರ ಸಮೀಪದ ಆಲುವಾ ಪ್ರದೇಶದ ಸ್ಥಳೀಯ ಮಾರುಕಟ್ಟೆಯ ಹಿಂಭಾಗದಲ್ಲಿ ಬಾಲಕಿಯ ಶವ ಗೋಣಿಚೀಲದಲ್ಲಿ ಕಟ್ಟಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ಶುಕ್ರವಾರವೇ ಬಂಧಿಸಲಾಗಿತ್ತು, ಆದರೆ ಆತ ಅಮಲೇರಿದ ಸ್ಥಿತಿಯಲ್ಲಿದ್ದ ಕಾರಣ ವಿಚಾರಣೆ ನಡೆಸಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಾಯಿ ಮತ್ತು ಸಹಪಾಠಿಗಳು ಸೇರಿದಂತೆ ಹಲವಾರು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡು ಆರೋಪಿಯನ್ನು, ಮಗುವನ್ನು ಕೊಂದ ರೀತಿಯಲ್ಲಿಯೇ ಕೊಲ್ಲಬೇಕು. ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಸಾರ್ವಜನಿಕರಿಗೆ ಒಪ್ಪಿಸಿ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಆರೋಪಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಸರ್ಕಾರ ಮತ್ತು ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಅನ್ವರ್ ಸಾದತ್ ಹೇಳಿದ್ದಾರೆ.

ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಅವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನರು ಬೀದಿಗಿಳಿಯಬೇಕು ಎಂದು ಕರೆ ನೀಡಿದ್ದಾರೆ.

ಘಟನೆಯ ನಂತರ, ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಮಗುವನ್ನು ಪತ್ತೆಹಚ್ಚುವಲ್ಲಿ ಅವರ ಕಡೆಯಿಂದ ಲೋಪವಾಗಿದೆ ಎಂದು ಹೇಳಿದೆ. ಕೇರಳ ಪೊಲೀಸ್ ಮುಖ್ಯಸ್ಥ ಶೇಕ್ ದರ್ವೇಶ್ ಸಾಹೇಬ್ ಅವರು ಆರೋಪಗಳನ್ನು ತಿರಸ್ಕರಿಸಿ ತನಿಖಾಧಿಕಾರಿಗಳ ಪರವಾಗಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿದ್ದಾರೆ.

ಕೇರಳ ಪೊಲೀಸರು ಶನಿವಾರ ಸಂತ್ರಸ್ತೆಯ ಕುಟುಂಬದ ಕ್ಷಮೆಯಾಚನೆ ಮಾಡಿ”ಮಗುವನ್ನು ಆಕೆಯ ಪೋಷಕರೊಂದಿಗೆ ಮತ್ತೆ ಸೇರಿಸುವ ಅವರ ಪ್ರಯತ್ನಗಳು ವಿಫಲವಾಗಿದೆ”ಎಂದು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next