ನವದೆಹಲಿ: ಐದು ಮಕ್ಕಳ ತಂದೆಯಾಗಿದ್ದು ವೃತ್ತಿಯಲ್ಲಿ ಟೇಲರ್ ಆಗಿರುವ ದಿಲ್ಲಿಯ 38 ವರ್ಷ ಪ್ರಾಯದ ಸುನೀಲ್ ರಸ್ತೋಗಿ ಎಂಬಾತ ತಾನು ಕಳೆದ 14 ವರ್ಷಗಳಲ್ಲಿ ನೂರಾರು ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಪ್ಪೊಪ್ಪಿಕೊಂಡಿ ದ್ದಾನೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆತ ನಡೆಸಿರುವ ಮೂರು ಲೈಂಗಿಕ ಕಿರುಕುಳ ಕೃತ್ಯಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ಸೆರೆ ಹಿಡಿದಿದ್ದು ತನಿಖೆಯ ವೇಳೆ ಆತ ತನ್ನ ಕಾಮುಕ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ.
ಆರೋಪಿ ರಸ್ತೋಗಿಯು ಕಳೆದ ಹಲವಾರು ವರ್ಷಗಳಲ್ಲಿ ಶಾಲಾ ಬಾಲಕಿಯನ್ನು ದಿಲ್ಲಿ ಹೊರಗೆ ಕರೆದೊಯ್ಯುತ್ತಿದ್ದ. “ನಿಮ್ಮ ಹೆತ್ತವರಿಗೆ ಹೊಸದಾಗಿ ಹೊಲಿಯಲಾದ ಬಟ್ಟೆಗಳನ್ನು ನೀಡುವೆ’ ಎಂದು ನಂಬಿಸಿ, ನಿರ್ಜನ ಪ್ರದೇಶಗಳಿಗೆ ಒಯ್ದು ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೋಗಿ ಬಾಯಿ ಬಿಟ್ಟಿರುವ ತನ್ನ ಕಾಮಕತನದ ಹಲವಾರು ಪ್ರಕರಣಗಳನ್ನು ಕೇಳಿ ಪೊಲೀಸರು ದಂಗಾಗಿ ಹೋಗಿ¨ªಾರೆ. ಇಷ್ಟು ದೀರ್ಘಕಾಲ, ಸರಿಸುಮಾರು 14 ವರ್ಷಗಳ ಕಾಲ, ಈತ ಯಾರ ಕಣ್ಣಿಗೂ ಬೀಳದೆ, ಯಾರ ಆರೋಪಕ್ಕೂ ಗುರಿಯಾ ಗದೆ ಹೇಗೆ ತಪ್ಪಿಸಿಕೊಂಡ ಎಂದವರು ಆಶ್ಚರ್ಯಪಟ್ಟಿದ್ದಾರೆ. ವಿಶೇಷವೆಂದರೆ 2006ರಲ್ಲಿ ಈತನ ವಾಸವಾಗಿದ್ದ ಉತ್ತರಾಖಂಡದ ರುದ್ರಾಪುರದಲ್ಲಿ ಒಮ್ಮೆ ಈ ಬಂಧಿತನಾಗಿ ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.
“ನಾನು 7ರಿಂದ 10 ವರ್ಷ ಪ್ರಾಯದ ಬಾಲಕಿಯನ್ನು ತನ್ನ ಕಾಮುಕ ಕೃತ್ಯಕ್ಕಾಗಿ ಶೋಷಿಸುತ್ತಿದ್ದೆ. ಶಾಲೆ ಬಿಟ್ಟು ಸಂಜೆ ಮನೆಗೆ ಹೋಗುವ ಬಾಲಕಿಯರನ್ನೇ ಗುರಿ ಇರಿಸಿಕೊಂಡು ಅವರನ್ನು ಕರೆಯುತ್ತಿದ್ದೆ. ನಿನ್ನ ತಂದೆ/ತಾಯಿ ನಿನಗೆ ಕೊಡಲೆಂದು ಕೆಲವು ವಸ್ತುಗಳನ್ನು/ಬಟ್ಟೆ ಬರೆಗಳನ್ನು ನನ್ನ ಬಳಿ ಕೊಟ್ಟಿದ್ದಾರೆ. ಅವುಗಳು ತೆಗೆದುಕೊಂಡು ಹೋಗು ಎಂದು ಹೇಳುತ್ತಿದ್ದೆ. ಬಳಿಕ ಅವರನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದೆ’ ಎಂದು ಆತ ತಿಳಿಸಿದ್ದಾನೆ.
ರಸ್ತೋಗಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಪೊಲೀಸ ರೀಗ ಆತನ ಮೂವರು ಪುತ್ರಿಯರಿಗೆ ಕೌನ್ಸೆಲಿಂಗ್ ನಡೆಸುತ್ತಿದ್ದು, ಅವರು ಕೂಡ ಖುದ್ದು ತಂದೆಯೇ ಕಾಮುಕತನಕ್ಕೆ ಬಲಿ ಯಾಗಿ¨ªಾರೆಯೇ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
ರಸ್ತೋಗಿ ಮೂಲತಃ ಉತ್ತರ ಪ್ರದೇಶದವನು. 1990ರಲ್ಲಿ ಆತ ತನ್ನ ಕುಟುಂಬ ದೊಂದಿಗೆ ದಿಲ್ಲಿಗೆ ಬಂದು ಇಲ್ಲಿ ನೆಲೆಸಿದ್ದ.