Advertisement

ಮೈತ್ರಿ ಸಮನ್ವಯಕ್ಕೆ ಸಮಿತಿ: ಬಿಜೆಪಿ-ಜೆಡಿಎಸ್‌ ಪಕ್ಷಗಳಿಂದ ತಲಾ 50 ಸದಸ್ಯರಿರುವ ಸಮಿತಿ ನೇಮಕ

12:13 AM Mar 27, 2024 | Shreeram Nayak |

ಬೆಂಗಳೂರು: ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೊದಲ ಬಾರಿಗೆ ಜಂಟಿ ಸಮನ್ವಯ ಸಮಿತಿ ರಚಿಸಲು ಉದ್ದೇಶಿಸಿವೆ. ಈ ಉದ್ದೇಶಕ್ಕಾಗಿ ಬಿಜೆಪಿಯಿಂದ 50, ಜೆಡಿಎಸ್‌ನ 50 ಮಂದಿಯನ್ನು ಆಯ್ಕೆ ಮಾಡಿ ಒಟ್ಟು 100 ಸದಸ್ಯರ ಜಂಬೋ ಸಮನ್ವಯ ಸಮಿತಿ ರಚನೆಗೆ ಮುಂದಾಗಿವೆ.

Advertisement

ಈ ಸಮಿತಿಯ ಮೊದಲ ಸಭೆ ಬುಧವಾರ ಮೈಸೂರಿನಲ್ಲಿ ನಡೆಯಲಿದೆ. ಮತ್ತೂಂದು ಸಭೆ ಮಾ. 29ರಂದು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಮೈಸೂರಿನಲ್ಲಿ ಬುಧವಾರ ಇದಕ್ಕೆ ಪೂರಕ ವಾಗಿ ಜೆಡಿಎಸ್‌ ಮುಖಂಡರ ಜತೆಗೆ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ. ವಿಜಯೇಂದ್ರ ಸಭೆ ನಡೆಸು ವರು. ಬಳಿಕ ಬೆಂಗಳೂರಿನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಹಿತ ಪಕ್ಷದ ಪ್ರಮುಖರು, ಮಾಜಿ ಸಿಎಂ ಯಡಿಯೂರಪ್ಪ ಒಳಗೊಂಡಂತೆ ಬಿಜೆಪಿಯ ಪ್ರಮುಖ ನಾಯಕರು ಮಾ. 29ರಂದು ಮಹತ್ವದ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಮಧ್ಯೆ ಸಮನ್ವಯ ಸಾಧಿಸುವ ಬಗ್ಗೆ ಚರ್ಚೆ ನಡೆಯಲಿದ್ದು, ಬಿಜೆಪಿ, ಜೆಡಿಎಸ್‌ನಿಂದ ತಲಾ 50 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಬಳಿಕ ಕುಮಾರಸ್ವಾಮಿ ಮತ್ತು ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next