Advertisement

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಗೆ ನೂರೂರು ಹಕ್ಕಿಗಳು ಬಲಿ

09:33 PM Jan 02, 2021 | Team Udayavani |

ರೋಮ್‌: ಇಟಲಿಯ ರೋಮ್‌ ನಗರದಲ್ಲಿ ಹೊಸ ವರ್ಷಾಚರಣೆಯ ನಿಮಿತ್ತ ಜನರು ಸಿಡಿಸಿದ ಪಟಾಕಿಗಳಿಂದಾಗಿ ನೂರಾರು ಪಕ್ಷಿಗಳು ಸತ್ತುಬಿದ್ದಿವೆ.

Advertisement

ರೋಮ್‌ನ ಮುಖ್ಯ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಪಕ್ಷಿಗಳು ಪಟಾಕಿಯ ಸದ್ದಿಗೆ ಬೆಚ್ಚಿ ಬಿದ್ದು ಹತ್ತಿರದ ಗಾಜುಗಳಿಗೆ ಅಥವಾ ಎಲೆಕ್ಟ್ರಿಕ್‌ ತಂತಿಯನ್ನು ಸ್ಪರ್ಷಿಸಿ ಮೃತಪಟ್ಟಿವೆ ಎನ್ನಲಾಗುತ್ತಿದೆ.

ಅಲ್ಲದೇ ಜೋರಾದ ಸದ್ದಿನಿಂದಾಗಿ ಈ ಪಕ್ಷಿಗಳಿಗೆ ಹೃದಯಾಘಾತವೂ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಅಂತಾರಾಷ್ಟ್ರೀಯ ಪ್ರಾಣಿ ದಯಾ ಸಂಘದ ವಕ್ತಾರೆ ಡೋರ್ಡಾನಾ ಡಿಗಿಲೋ.

ಇದನ್ನೂ ಓದಿ:ವಕೀಲನ ಹತ್ಯೆ ಮಾಡಿ ಶಿಂಷಾ ನದಿಗೆ ಎಸೆದ ದುಷ್ಕರ್ಮಿಗಳು: ಪೊಲೀಸರಿಂದ ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next