Advertisement

ಗಾಂಧೀಜಿ ಭೇಟಿ ನೀಡಿದ ಮಂದಿರಕ್ಕೆ ನೂರರ ಸಂಭ್ರಮ

05:07 AM Feb 24, 2019 | |

ಮಹಾನಗರ: ಇದೊಂದು ಹಳೆಯ ಕಟ್ಟಡ. ಆದರೆ ಇದರ ಇತಿಹಾಸ ಮಾತ್ರ ಭವ್ಯವಾದುದು. ಇಲ್ಲಿ ಸುಮಾರು 85 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭೇಟಿಯಿತ್ತು ಜಾಗೃತಿ ಸಂದೇಶ ನೀಡಿದ್ದರು. ದುಶ್ಚಟಗಳಿಂದ ಬಳಲು ತ್ತಿದ್ದ ಮಂದಿಯನ್ನು ಈ ಪಿಡುಗಿ ನಿಂದ ಮುಕ್ತಗೊಳಿಸಿ ಹಲವಾರು ಕುಟುಂಬಗಳ ಬದುಕಿಗೆ ಬೆಳಕು ನೀಡಿದ ಮಂದಿರವಿದು. ನಗರದ ಹೊಗೆ ಬಜಾ ರ್‌ ನಲ್ಲಿರುವ ಜ್ಞಾನೋದಯ ಸಮಾಜ ಮಂದಿರ ಈ ಹೆಗ್ಗಳಿಕೆಯನ್ನು ಹೊಂದಿರುವ ತಾಣ.

Advertisement

1919ರ ಫೆ. 22ರಂದು ಉದ್ಘಾಟನೆಗೊಂಡಿದ್ದ ಜ್ಞಾನೋದಯ ಸಮಾಜ ಮಂದಿರ 2019ರ ಫೆ. 22ಕ್ಕೆ ನೂರು ವರ್ಷಗಳನ್ನು ಪೂರೈಸಿದೆ. ಮೊಗವೀರ ಮುಖಂಡ ದಿ| ಮೋನಪ್ಪ ತಿಂಗಳಾಯ ಅವರು ಸಮುದಾಯದವರ ಸಹಕಾರ ಪಡೆದುಕೊಂಡು ಈ ಮಂದಿರವನ್ನು ನಿರ್ಮಿಸಿದ್ದರು. 1934ರ ಫೆ. 24ರಂದು ಮಹಾತ್ಮಾ ಗಾಂಧೀಜಿಯವರು ಮೊಗವೀರ ಸಮುದಾಯದ ಕೋರಿಕೆ ಮೇರೆಗೆ ಇಲ್ಲಿಗೆ ಭೇಟಿ ನೀಡಿ ಸಮುದಾಯವರನ್ನುದ್ದೇಶಿಸಿ ಮಾತನಾಡಿದ್ದರು. 

ಅವರು ಈ ಮಂದಿರಕ್ಕೆ ಭೇಟಿ 2019ರ 24ಕ್ಕೆ 85 ವರ್ಷಗಳಾಗುತ್ತಿವೆ. ಮಹಾತ್ಮಾ ಗಾಂಧೀಜಿ ಯವರು 1920, 1927, 1934 ಸೇರಿದಂತೆ ಒಟ್ಟು ಮೂರು ಬಾರಿ ನಗರಕ್ಕೆ ಆಗಮಿಸಿದ್ದರು. 1934ರಲ್ಲಿ ಆಗಮಿಸಿದ್ದ ಸಂದರ್ಭ ಅವರು ಪಾನನಿಷೇಧದ ಬಗ್ಗೆ ಪ್ರಚಾರ ನಡೆಸುತ್ತಿದ್ದರು. ಆಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದ ನಗರದ ಮೊಗವೀರ ಸಮುದಾಯದ ಎಚ್‌.ಕೆ. ತಿಂಗಳಾಯ ಮತ್ತು ಮೋನಪ್ಪ ತಿಂಗಳಾಯರ ಅವರ ವಿನಂತಿಯ ಮೇರೆಗೆ ಗಾಂಧೀಜಿಯವರು ಜ್ಞಾನೋದಯ ಮಂದಿಕ್ಕೆ ಆಗಮಿಸಿ ಸಮಾಜದ ಬಾಂಧವರನ್ನುದ್ದೇಶಿಸಿ ಮಾತನಾಡಿ, ಮದ್ಯಪಾನ ದುಶ್ಚಟದ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವಂತೆ ಕೋರಿಕೊಂಡಿದ್ದರು. ಈ ಸಂದರ್ಭ ಗಾಂಧೀಜಿಯವರ ಹರಿಜನ ಫಂಡಿಗೆ ಆಗ ದೊಡ್ಡ ಮೊತ್ತವಾಗಿದ್ದ 500 ರೂ. ದೇಣಿಗೆಯನ್ನು ಕೂಡ ಮೊಗವೀರ ಸಮುದಾಯದವರ ಪರವಾಗಿ ನೀಡಲಾಗಿತ್ತು. ಈಗ ಈ ಮಂದಿರವನ್ನು ಮೋನಪ್ಪ ತಿಂಗಳಾಯರ ಮೊಮ್ಮಗ ಪ್ರೇಮ್‌ಚಂದ್ರ ತಿಂಗಳಾಯ ಅವರು ನೋಡಿಕೊಳ್ಳುತ್ತಿದ್ದಾರೆ. 

ಕಾಯಕಲ್ಪ ಅಗತ್ಯ
ಜ್ಞಾನೋದಯ ಮಂದಿರ ಪಾರಂಪರಿಕ ಕಟ್ಟಡ ಎಂಬುದಾಗಿ ದ.ಕ. ಜಿಲ್ಲಾಡಳಿತದಿಂದ ತಾಣದಲ್ಲಿ ಬೋರ್ಡ್‌ ಹಾಕಿ ಕಟ್ಟಡದ ಮಹತ್ವವನ್ನು ವಿವರಿಸಲಾಗಿದೆ. ನೂರು ವರ್ಷಗಳ ಹಳೆಯ ಕಟ್ಟಡ ಇದೀಗ ದುರಸ್ತಿ ಕಾಣದೆ ಶಿಥಿಲಗೊಂಡಿದೆ. ಗಾಂಧೀಜಿಯವರು ಸಂದೇಶ ನೀಡಿದ ವೇದಿಕೆ ಹಾಗೂ ಸಣ್ಣ ಸಭಾಭವನವಿದೆ. ಕಟ್ಟಡಕ್ಕೆ ಕಾಯಕಲ್ಪನೀಡಿ ಸಂರಕ್ಷಿಸುವ ಕಾರ್ಯ ಅವಶ್ಯವಿದೆ. ಮಹಾತ್ಮಾಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಹೊರ ತಂದಿರುವ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವನ್ನು ಅಂಚೆ ಇಲಾಖೆ ಈ ಕಟ್ಟಡದಲ್ಲಿ ಹಮ್ಮಿಕೊಳ್ಳುವ ಮೂಲಕ ಇದರತ್ತ ಸರಕಾರ, ಸಮಾಜ, ಜಿಲ್ಲಾಡಳಿತದ ಗಮನ ಸೆಳೆಯುವ ಕಾರ್ಯ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next