Advertisement

ಬಾಂಗ್ಲಾ ಹುಲಿಗಳ ಹುಟ್ಟಡಗಿಸಿದ ರೋಹಿತ್, ರಾಹುಲ್

03:00 PM Jul 03, 2019 | keerthan |

ಬರ್ಮಿಂಗ್ ಹ್ಯಾಮ್: ಭಾರತೀಯ ಆರಂಭಿಕ ಜೋಡಿಯ ಭರ್ಜರಿ ಬ್ಯಾಟಿಂಗ್ ನಿಂದ ಬಾಂಗ್ಲಾ ಬೌಲರ್ ಗಳನ್ನು ಬೆವರಿಳಿಸಿದ್ದಾರೆ. ಭರ್ಜರಿ ಫಾರ್ಮಿನಲ್ಲಿರುವ ರೋಹಿತ್ ಶರ್ಮಾ ಕೂಟದ ನಾಲ್ಕನೇ ಶತಕ ಬಾರಿಸಿ ಮಿಂಚಿದರು. ಭಾರತ 30 ಓವರ್ ವೇಳೆಗೆ 1 ವಿಕೆಟ್ ನಷ್ಟಕ್ಕೆ 181ರನ್ ಗಳಿಸಿದೆ.

Advertisement

ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು. ಈ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದ ಆರಂಭಿಕರು ಮೊದಲ ವಿಕೆಟ್ ಗೆ ಮುರಿಯದ ಶತಕದ ಜೊತೆಯಾಟ ಆಡುತ್ತಿದ್ದಾರೆ.

ರೋಹಿತ್ 92 ಎಸೆತಗಳಲ್ಲಿ 104ರನ್ ಗಳಿಸಿ ಔಟಾದರು . ಈ ಇನ್ನಿಂಗ್ಸ್ ನಲ್ಲಿ ಶರ್ಮಾ  ಐದು ಭರ್ಜರಿ ಸಿಕ್ಸರ್  ಐದು ಬೌಂಡರಿ ಬಾರಿಸಿದರು. ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಕೆ.ಎಲ್. ರಾಹುಲ್ 71 ರನ್ ಗಳಿಸಿ ಆಡುತ್ತಿದ್ದಾರೆ.

ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆ ಮಾಡಿದೆ. ಕೇದಾರ್ ಜಾಧವ್ ಬದಲು ದಿನೇಶ್ ಕಾರ್ತಿಕ್ ಮತ್ತು ಕುಲದೀಪ್ ಯಾದವ್ ಬದಲು ಭುವನೇಶ್ವರ್ ಕುಮಾರ್ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next