Advertisement

ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ

10:14 PM Jan 12, 2024 | Team Udayavani |

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿಯ ಹಣವನ್ನು ಉಪ ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ಎಣಿಸಲಾಯಿತು.

Advertisement

ವರ್ಷಕ್ಕೆ ಎರಡು ಬಾರಿ ಹುಂಡಿಯಲ್ಲಿರುವ ಹಣವನ್ನು ತೆಗೆಯಲಾಗುತ್ತದೆ. ಪ್ರತಿವರ್ಷ ದನಗಳ ಜಾತ್ರೆ ನಡೆಯುವ ಒಂದು ತಿಂಗಳ ಮುಂಚಿತವಾಗಿ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿರುವ ಹುಂಡಿಯನ್ನ ಹೊಡೆದು ದೇವಸ್ಥಾನದ ಖಾತೆಗೆ ಹಾಕಲಾಗುತ್ತದೆ. ಈ ಭಾರಿ ದೇವಸ್ಥಾನದ ಹುಂಡಿಯಲ್ಲಿ ಸುಮಾರು 7 ಲಕ್ಷದ 2,640 ರೂ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಣಸೆ ಮರ ಹಣ್ಣಿನ ಹರಾಜು

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತ ಸುಮಾರು 25 ಕ್ಕೂ ಹೆಚ್ಚು ಹುಣಸೆ ಮರಗಳು ಇದ್ದು, ಪ್ರತಿವರ್ಷದಂತೆ ಈ ವರ್ಷವು ಸಹ ಹುಣಸೆ ಮರಗಳ ಹಣ್ಣನ್ನು ಹರಾಜು ಮಾಡಲಾಗಿದೆ. ಹರಾಜಿನಲ್ಲಿ 76 ಸಾವಿರಕ್ಕೆ ಹರಾಜು ಮಾಡಲಾಗಿದೆ ಎಂದು ತಿಳಿದುಬಂದಿದೆ.
ದನಗಳ ಜಾತ್ರೆ ಹರಾಜು

2024 ರ ದನಗಳ ಜಾತ್ರೆ, ವಾಹನದ ಸುಂಕ, ಅಂಗಡಿಗಳ ಸುಂಕ ಹಾಗೂ ಬ್ರಹ್ಮರಥೋತ್ಸವದ ದಿನದೊಂದು ಹಣ್ಣುಕಾಯಿಯ ಸುಂಕದ ಹರಾಜು ಪ್ರಕ್ರಿಯೆ ನಡೆದಿದೆ. ದನಗಳಿಗೆ ಸುಂಕ ಹಾಗೂ ವಾಹನದ ಸುಂಕವನ್ನು 1 ಲಕ್ಷದ 30 ಸಾವಿರಕ್ಕೆ ಹರಾಜು ನಡೆದಿದೆ. ದೇವಸ್ಥಾನದ ಸುತ್ತಮುತ್ತ ಇರುವ ಅಂಗಡಿಗಳ ಸುಂಕವನ್ನು 1 ಲಕ್ಷದ 52 ಸಾವಿರಕ್ಕೆ ಹರಾಜು ನೆಡೆದಿದೆ. ಬ್ರಹ್ಮರಥೋತ್ಸವದ ದಿನದೊಂದು ಹಣ್ಣುಕಾಯಿ ಸುಂಕವನ್ನ 15 ಸಾವಿರಕ್ಕೆ ಹರಾಜು ನಡೆದಿದೆ ಎಂದು ತಿಳಿದುಬಂದಿದೆ.

Advertisement

ಹರಾಜು ಪ್ರಕ್ರಿಯೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ನರಸಿಂಹಮೂರ್ತಿ, ಕಂದಾಯ ಅಧಿಕಾರಿ ಜಯಪ್ರಕಾಶ್, ಸತ್ಯನಾರಾಯಣ್ ರಾವ್ ಮುಖಂಡರಾದ ಜಯರಾಮ್, ರಾಮಕೃಷ್ಣಯ್ಯ, ಸುಬಾನ್, ಬಾಲರಾಜು, ಕೇಶವಮೂರ್ತಿ, ಕಾಳಿಚರಣ್, ಜಯರಾಜ್, ಶಶಿಧರ್, ಚಂದ್ರಣ್ಣ, ಹನುಮಂತರಾಜು, ಉಮಾಶಂಕರ್, ಸಣ್ಣರಂಗಯ್ಯ, ಮಂಜಣ್ಣ, ರಂಗರಾಜು, ಶ್ರೀನಿವಾಸ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

ಅಭಿವೃದ್ಧಿ ಕಾಣದ ಆಂಜನೇಯಸ್ವಾಮಿ ದೇವಸ್ಥಾನ
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನ ಸುಮಾರು 3 ಸಾವಿರಕ್ಕೂ ಅಧಿಕ ಪುರಾತನ ಕಾಲದ ದೇವಸ್ಥಾನವಾಗಿದ್ದು, ಅದರೆ ಅಭಿವೃದ್ದಿ ಕಾಣದೇ ಸೊರಗುತ್ತಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು, ದೇವಸ್ಥಾನದ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ ದೇವಸ್ಥಾನದ ಅಭಿವೃದ್ದಿ ಮಾಡುವಲ್ಲಿ ಅಧಿಕಾರಗಳು ವಿಫಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next