Advertisement

ನಾಗರಹೊಳೆ ಉದ್ಯಾನವನದಿಂದ ಹೊರಬಂದ ಕಾಡಾನೆಗಳು: ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ

08:50 PM Dec 15, 2022 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಿಂದ ಹೊರಬಂದಿದ್ದ ಎರಡು ಸಲಗಗಳು ತಾಲೂಕಿನ ಗಡಿಯಂಚಿನ ಗಾವಡಗೆರೆ ಹೋಬಳಿಯ ಕೃಷ್ಣಾಪುರ ಬಳಿಯ ಗದ್ದೆಯಲ್ಲಿ ಬೀಡು ಬಿಟ್ಟಿದ್ದು, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

Advertisement

ಕಳೆದ ಎರಡು ದಿನಗಳ ಹಿಂದೆ ಉದ್ಯಾನವನದಿಂದ ಹೊರಬಂದಿರುವ ಈ ಸಲಗಗಳು ಮೈಸೂರು-ಹುಣಸೂರು ಹೆದ್ದಾರಿಯ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು, ಅರಣ್ಯ ಸಿಬ್ಬಂದಿಗಳು ಸಾಕಾನೆಗಳಾದ ಬೀಮ ಮತ್ತು ಮಹೇಂದ್ರ ನೆರವಿನಿಂದ ಮರಳಿ ಕಾಡಿಗಟ್ಟುವ ವೇಳೆ ಕಾಡಿನ ಕಡೆಗೆ ತೆರಳಬೇಕಿದ್ದ ಸಲಗಗಳು ಕೆ.ಆರ್.ನಗರ ಕಡೆಗೆ ಪೇರಿ ಕಿತ್ತಿದ್ದು, ಕೆ.ಆರ್.ನಗರ ಅರಕೆರೆ, ಅರಕೆರೆ ಕೊಪ್ಪಲು, ಕಂಬಾರಕೊಪ್ಪಲು ಬಳಿಯ ಭತ್ತದ ಗದ್ದೆಯಲ್ಲಿ ಓಡಾಟ ನಡೆಸಿವೆ.

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಡಿ.ಸಿ.ಎಫ್.ಸೀಮಾ, ಎಸಿಎಫ್. ಅನುಷಾ, ಎಸಿಎಫ್. ಯಾನಂದ್, ಆರ್.ಎಫ್.ಓ.ಗಳಾದ ನಂದಕುಮಾರ್, ಸಂತೋಷ್ ಹುಗಾರ್,ಅನಿತಾರಾಜು ನೇತೃತ್ವದ ಕಾಡಾನೆ ತಡೆ ಸಮಿತಿಯ ಸಿಬ್ಬಂದಿಗಳು ಹರಸಾಹಸ ಪಟ್ಟು ಕೆ.ಆರ್.ನಗರ ಕಡೆಯಿಂದ ಹುಣಸೂರು ತಾಲೂಕಿನ ಕೃಷ್ಣಪುರ, ಹೊಜ್ಜೊಡ್ಲು ಗ್ರಾಮದ ಲಕ್ಷ್ಮಣ ತೀರ್ಥ ನದಿ ಬಳಿಯ ಕುರುಚಲು ಕಾಡಿನಲ್ಲಿ ಸೇರಿಕೊಂಡಿದ್ದು, ಸಾರ್ವಜನಿಕರ ಓಡಾಟ ಕಡಿಮೆಯಾದ ನಂತರ ಮತ್ತೆ ಕಾರ್ಯಾಚರಣೆ ನಡೆಸಿ ಅರಬ್ಬಿತ್ತು ಅರಣ್ಯದ ಮೂಲಕ ಮತ್ತೆ ನಾಗರಹೊಳೆ ಉದ್ಯಾನವನ ಸೇರಿಸಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕುರುಗೋಡು: ನಿವೇಶನದ ಸಲುವಾಗಿ ಎರಡು ಸಮುದಾಯದ ಯುವಕರ ನಡುವೆ ಸಂಘರ್ಷ

Advertisement

Udayavani is now on Telegram. Click here to join our channel and stay updated with the latest news.

Next