Advertisement

ಕಾಡು ಪ್ರಾಣಿಗಳ ಹಾವಳಿ ತಡೆಗೆ ಗ್ರಾಮಸ್ಥರ ಪ್ರತಿಭಟನೆ : ಶಾಸಕರಿಂದ ಅರಣ್ಯಾಧಿಕಾರಿಗಳ ತರಾಟೆ

08:48 PM Feb 03, 2022 | Team Udayavani |

ಹುಣಸೂರು : ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸುವವರೆಗೂ ರಾಜೇಶನ ಶವವನ್ನು ತೆಗೆಯುವುದಿಲ್ಲವೆಂದು ಕುಟುಂಬದವರೊಂದಿಗೆ ಗ್ರಾಮಸ್ಥರು ಪಟ್ಟ ಹಿಡಿದ ಘಟನೆ ತಾಲೂಕಿನ ಕೊಳವಿಗೆಯಲ್ಲಿ ನಡೆಯಿತು.

Advertisement

ವಿಷಯ ತಿಳಿದ ಶಾಸಕ ಎಚ್.ಪಿ.ಮಂಜುನಾಥ್ ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಈ ವೇಳೆ ಎಪಿಎಂಸಿ.ಅಧ್ಯಕ್ಷ ಮುದಗನೂರುಸುಭಾಷ್, ಮುಖಂಡರಾದ ವೆಂಕಟೇಶ್, ಮಹೇಶ್ ಇತರರು ಮಾತನಾಡಿ ಕಾಡಂಚಿನ ಗ್ರಾಮಗಳಲ್ಲಿ ಒಂದೆಡೆ ಕಾಡಾನೆ ಮತ್ತೊಂದೆಡೆ ಹುಲಿ ಕಾಟವೂ ಹೆಚ್ಚಿದ್ದು, ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ, ಮಾಹಿತಿ ನೀಡುವವರನ್ನೇ ಬೆದರಿಸುತ್ತಾರೆ, ಹೀಗಾದರೆ ಹಳ್ಳಿಗರು ಏನು ಮಾಡಲು ಸಾಧ್ಯ, ನಮಗೆ ಅಧಿಕಾರ ನೀಡಿ ಕಾಡಾನೆಗಳ ಉಪಟಳವನ್ನು ನಾವೇ ನಿಲ್ಲಿಸುತ್ತೇವೆ. ಇಲ್ಲವೇ ಆನೆ-ಹುಲಿಗಳನ್ನು ಕಾಡಿನಿಂದ ಹೊರಬರದಂತೆ ನೋಡಿಕೊಳ್ಳಬೇಕು. ತಾತ್ಸಾರ ಮಾಡುವ ಅಧಿಕಾರಿಯನ್ನು ಅಮಾನತ್ತು ಪಡಿಸಬೇಕೆಂದು ಪಟ್ಟು ಹಿಡಿದರು.

ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೊಳಪಡಿಸಿ ನಿಮ್ಮಿಷ್ಟದಂತೆ ಕೆಲಸ ಮಾಡೋದಲ್ಲ. ಜನರ ಪ್ರಶ್ನೆಗೆ ನೀವೇ ಉತ್ತರ ನೀಡಿ, ರೈಲ್ವೆ ಹಳಿ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲವೇ. ಅಲ್ಲಿಯವರೆಗೆ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಎಚ್ಚರಿಸಿದರು. ಈ ವೇಳೆ ಮಾಹಿತಿ ನೀಡಿದ ಎಸಿಎಫ್ ಮೂರು ಕಿ.ಮೀ. ಬಾಕಿ ಉಳಿದಿದ್ದು, ಟೆಂಡರ್ ಆಗಿದೆ, ಕಾಮಗಾರಿ ಆರಂಭಿಸಲು ಸೂಚಿಸಲಾಗುವುದೆಂದರು.

ಇದನ್ನೂ ಓದಿ : ಬೇಟಿ ಬಚಾವೋ,ಬೇಟಿ ಪಡಾವೋ ಪೊಳ್ಳು ಘೋಷಣೆ: ಹಿಜಾಬ್ ವಿವಾದಕ್ಕೆ ಮುಫ್ತಿ

Advertisement

ಹಗಲಿನಲ್ಲಿ ತ್ರೀಫೇಸ್ ವಿದ್ಯುತ್ ನೀಡಿ:
ಕಾಡಂಚಿನ ದೊಡ್ಡಹೆಜ್ಜೂರು ಹಾಗೂ ಕಿರಂಗೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ರಾತ್ರಿ ವೇಳೆ ತ್ರೀಫೇಸ್ ಕೊಡುತ್ತಾರೆ, ಹೀಗಾಗಿ ತೋಟದ ಕೆಲಸ ರಾತ್ರಿವೇಳೆ ಮಾಡಬೇಕು. ಹಗಲಿನಲ್ಲಿ ತ್ರೀಫೇಸ್ ಕೊಡಲು ಪರಿಶೀಲಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಪರ್ಕ ಕಲ್ಪಿಸಬೇಕೆಂದು ಎಇಇ.ಸಿದ್ದಪ್ಪರಿಗೆ ಶಾಸಕರು ಸೂಚಿಸಿದರು.

ಹೆಚ್ಚಿನ ಕಾವಲಿಗೆ ಭರವಸೆ, ಪ್ರತಿಭಟನೆ ಹಿಂದಕ್ಕೆ:
ಗ್ರಾಮಸ್ಥರು ರಾಜೇಶನ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿಸಲು ಸಹಕಾರ ನೀಡಬೇಕು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಸಿಬ್ಬಂದಿ ನೇಮಿಸಲು ಕ್ರಮವಹಿಸಲಾಗುವುದು. ತಾತ್ಕಾಲಿಕವಾಗಿ 2 ಲಕ್ಷರೂ ಪರಿಹಾರ ನೀಡಲಾಗುತ್ತಿದ್ದು, ಬಾಕಿ ಉಳಿದ 5.50 ಲಕ್ಷರೂವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆಂಬ ಶಾಸಕರ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.

ಅಧಿಕಾರಿಗಳಿಗೆ ತರಾಟೆ: ಕಾಡಿನ ಬಗ್ಗೆ ಪ್ರೀತಿ ಇರಲಿ, ಜನರೊಂದಿಗೆ ಸೌಜನ್ಯದಿಂದ ವರ್ತಿಸಿ: ಏನ್ರೀ ನಿಮಗೆ ಕಾಡು ಕಾಯೋಕೂ ಆಗಲ್ಲ, ವನ್ಯಪ್ರಾಣಿ- ಕೆಳಹಂತದ ಸಿಬ್ಬಂದಿಗಳ ಮೇಲೆ ಪ್ರೀತಿನೂ ಇಲ್ಲ, ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ, ಇಲ್ಲವೇ ವರ್ಗಾವಣೆಮಾಡಿಸಿಕೊಳ್ಳಿರೆಂದು ಅರಣ್ಯಾಧಿಕಾರಿಗಳನ್ನು ಶಾಸಕ ಮಂಜುನಾಥ್ ತರಾಟೆಗೊಳಪಡಿಸಿದರು
ಮಾಜಿ ಜಿ.ಪಂ.ಸದಸ್ಯ ಕಟ್ಟನಾಯಕ, ದೊಡ್ಡಹೆಜ್ಜೂರು ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಮಾಜಿ ಅಧ್ಯಕ್ಷ ದೇವರಾಜ್, ಕಸ್ತೂರಿಗೌಡ, ಗಣೇಶ್, ಸ್ವಾಮಿ, ಮಹದೇವು, ಆರ್‌ಎಫ್‌ಓಗಳಾದ ಕಿರಣ್‌ಕುಮಾರ್, ನಮನ್‌ನಾರಾಯಣ ನಾಯಕ, ಸೇರಿದಂತೆ೫೦೦ಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next