Advertisement
ನೇರಳಕುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉದಯ್ ಎಂಬುವರು ತಮ್ಮ ಕೆ.ಜಿ.ಹಬ್ಬನಕುಪ್ಪೆಯ ತೋಟದ ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಾಕಿದ್ದು, ಹಸುವಿನ ಮೇಲೆ ಹುಲಿಯ ದಾಳಿಯಿಂದ ಗಾಬರಿಗೊಂಡ ಹಸು ಎಗರಿದ್ದರಿಂದ ಕಟ್ಟಿದ್ದ ಹಗ್ಗ ತುಂಡಾಗಿದ್ದರಿಂದಾಗಿ ಹುಲಿ ಬಾಯಿಯಿಂದ ತಪ್ಪಿಸಿಕೊಂಡಿದೆ. ಹುಲಿ ಹಸುವಿನ ಮೇಲೆ ಮತ್ತೆ ದಾಳಿ ನಡೆಸಿದರೂ ಹಸು ಮಾತ್ರ ಹುಲಿಯೊಂದಿಗೆ ಸೆಣಸಾಟ ನಡೆಸಿ ಹುಲಿ ಬಾಯಿಂದ ಪಾರಾಗಿದ್ದು, ಮುಂಜಾನೆ ಹಾಲು ಕರೆಯಲು ಮನೆಯವರು ತೆರಳಿದ್ದ ವೇಳೆ ಹುಲಿ ಕಾಡಿನತ್ತ ಓಡಿಹೋಗಿದೆ.
ಈ ಭಾಗದ ಜನರು ಭಯಬೀತರಾಗಿದ್ದು, ಬೋನಿಟ್ಟು ಹುಲಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ನೇರಳಕುಪ್ಪೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Related Articles
Advertisement