Advertisement
ತಾಲೂಕಿನ ಹನಗೋಡು ಹೋಬಳಿಯ ಕಡೇಮನಹಳ್ಳಿ ಗ್ರಾಮದಲ್ಲಿ ಹುಣಸೂರು ಉಪ ವಿಭಾಗದ ವತಿಯಿಂದ ಚೆಸ್ಕಾಂ ವತಿಯಿಂದ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ ಮಾತನಾಡಿದ ಅನೇಕ ರೈತರು ಕಾಡಂಚಿನ ಗ್ರಾಮಗಳಲ್ಲಿ ಸಂಜೆ 6 ಗಂಟೆಗೆ ವಿದ್ಯುತ್ ಪೂರೈಸುತ್ತಿರುವುದ್ದು, ವನ್ಯಜೀವಿಗಳ ಹಾವಳಿಯಿಂದ ಜಮೀನಿಗೆ ಹೋಗದಂತಾಗಿದ್ದು, ಹಗಲು ವೇಳೆಯೇ ವಿದ್ಯುತ್ ಪೂರೈಸಬೇಕೆಂಬ ಬೇಡಿಕೆಗೆ ಇದು ನಿಗಮದ ವ್ಯಾಪ್ತಿಗೆ ಬರಲಿದೆ. ನಿಗಮಕ್ಕೆ ಮಾಹಿತಿ ನೀಡಲಾಗುವುದೆಂದು ಎಇಇ ಸಿದ್ದಪ್ಪ ತಿಳಿಸಿದರು.
ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಿಕ್ಕೇರಿಕಟ್ಟೆ, ಹೆಬ್ಬಾಳ, ಬೆಕ್ಕೆಶೆಡ್ ಗ್ರಾಮಗಳಲ್ಲಿ ಅವರವರ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದು, ನಿರಂತರ ಜ್ಯೋತಿ ಸಂಪರ್ಕ ನೀಡಬೇಕೆಂಬ ಗ್ರಾಮಸ್ಥರ ಒತ್ತಾಯಕ್ಕೆ ತಾಲೂಕಿನಲ್ಲಿ ಇದೇ ಮಾದರಿಯ 780 ಮನೆಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಕಲ್ಪಿಸಬೇಕಿದ್ದು, ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕ ಕೂಡಲೆ ಸೌಲಭ್ಯ ಕಲ್ಪಿಸಲಾಗುವುದೆಂದು ಭರವಸೆ ಇತ್ತರು. ಲೋ ವೋಲ್ಟೇಜ್ ಸರಿಪಡಿಸಿ:
ಕಿಕ್ಕೇರಿಕಟ್ಟೆ ಭಾಗದಲ್ಲಿ ನಿತ್ಯವೂ ಲೋ ವೋಲ್ಟೇಜ್‌ನಿಂದಾಗಿ ತೊಂದರೆಯಾಗುತ್ತಿದ್ದು, ವೋಲ್ಟೇಜ್ ಸರಿಪಡಿಸುವಂತೆ ರೈತರು ಬೇಡಿಕೆ ಇಟ್ಟರು. ಈ ಬಗ್ಗೆ ಕ್ರಮವಹಿಸುವುದಾಗಿ ಎಇಇ ಭರವಸೆ ಇತ್ತರು.
Related Articles
Advertisement
ಕಾರ್ಯಕ್ರಮದಲ್ಲಿ ಸಹಾಯಕ ಇಂಜಿನಿಯರ್ ವಿಕೃತ್, ಜೆ.ಇ.ಗಳಾದ ವಿನಯ್, ಮೋಹನ್‌ಕುಮಾರ್, ರಂಜನ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.