ಹುಣಸೂರು: ನಗರ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಂದ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಯಾಗಿದ್ದು.ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ರಾತ್ರಿ 8.30 ರವೇಳೆಗೆ ಆರಂಭವಾದ ಗುಡುಗು ಸಿಡಿಲು ಸಹಿತ ಮಳೆ ಒಂದೇ ಸಮನೆ ಜೋರಾಗಿ ಸುರಿದಿದ್ದು.ಬಾರೀ ಬಿರುಗಾಳಿಯಿಂದಾಗಿ ನಗರ ಸೇರಿದಂತೆ ಸುತ್ತಲುತ್ತಲ ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಹಿಳಾ ಕಾಲೇಜು ಬಳಿಯ ಬೃಹತ್ ಆಲದ ಮರ ಬುಡಸಹಿತ ಉರುಳಿ ಬಿದ್ದಿದ್ದರೆ. ಬ್ರಾಹ್ಮಣ ಬಡಾವಣೆಯ ಅಡುಗೆ ಸುಬ್ಬಣ್ಣನವರ ಮನೆ ಮೇಲಿದ್ದ ಸೋಲಾರ್ ಹಾಗೂ ವಾಟರ್ ಟ್ಯಾಂಕ್ ಹಾರಿ ಬಿದ್ದ ಪಕ್ಕದ ಮನೆಯ ಶೀಟ್ ಗಳು ಪುಡಿಪುಡಿಯಾಗಿ ಮನೆಯೊಳಗೆಯಲ್ಲಾ ಮಳೆ ನೀರು ಸುರಿದಿದೆ.ಡೀ ಮನೆಯಲ್ಲಿದ್ದ ವಸ್ತುಗಳೆಲ್ಲಾ ಮಳೆ ನೀರಿನಲ್ಲಿ ತೋಯ್ದು ಹೋಗಿದೆ.
ಹುಣಸೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಹುಣಸೂರು ನಗರದ ಸಮೀಪದ ಅಗ್ನಿ ಶಾಮಕ ಠಾಣೆ ಎದುರಿನ ರಸ್ತೆ ಬದಿಯ ಹತ್ತಾರು ಮರಗಳು ಬುಡ ಸಹಿತ ಉರುಳಿ ಬಿದ್ದಿದ್ದರಿಂದಾಗಿ ರಾತ್ರಿ 10 ರಿಂದ 12 ರ ವರೆಗೆ ಹೆದ್ದಾರಿ ಬಂದಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಗ್ನಿಶಾಮಕ ಹಾಗೂ ಗೃಹರಕ್ಷಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿಯೇ ರಸ್ತೆಗೆ ಬಿದ್ದಿದ್ದ ಮರಗಳನ್ನು ಕಟಾವು ಮಾಡಿ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರಾತ್ರಿ ಕರ್ತವ್ಯದಲ್ಲಿದ್ದ ಬೆರಳೆಣೆಕೆಯಷ್ಟು ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಟ್ಟರು.
ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು ಹೋಗಿದ್ದರಿಂದಾಗಿ ಭಾನುವಾರ ಬೆಳಗ್ಗೆ 10 ಗಂಟೆಯಾದರೂ ಸಂಪರ್ಕ ಕಲ್ಪಿಸಲು ಚೆಸ್ಕಾಂ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರು.
ಹಲವೆಡೆ ಶಾಸಕ ಹೆಚ್ ಪಿ ಮಂಜುನಾಥ್. ತಹಸೀಲ್ದಾರ್ ಡಾ ಅಶೋಕ್. ಡಿವೈಎಸ್ ಪಿ ರವಿಪ್ರಸಾದ್. ಪೌರಾಯುಕ್ತ ರವಿಕುಮಾರ್ ಚೆಸ್ಕಾಂ ಎಇ ಇ ಸಿದ್ದಪ್ಪ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು