Advertisement
ಹುಣಸೂರು ತಾಲೂಕಿನ ಕಟ್ಟೆಮಾಳಲವವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 29 ವರ್ಷಗಳ ಹಿಂದೆ ಸಹಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಿನಲ್ಲಿ ಆತನ ಕಿರಿಯ ಸಹೋದರ ಲಕ್ಷ್ಮಣೇ ಗೌಡ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತ ಹುಣಸೂರಿನ ಇಂಟೆಕ್ ರಾಜು ಅನುಮಾನ ವ್ಯಕ್ತಪಡಿಸಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ದಾಖಲಾತಿ ಪಡೆದ ನಂತರ ನಖಲಿ ಶಿಕ್ಷಕನ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ 2019 ರಲ್ಲಿ ದೂರು ಸಲ್ಲಿಸಿದ್ದರು.
Related Articles
Advertisement
ಮತ್ತೆ ಲೋಕಾಯಕ್ತ ಅಧಿಕಾರಿಗಳು ಆರೋಪಿತ ಶಿಕ್ಷಕ ಲಕ್ಷ್ಮಣೇ ಗೌಡ ಮತ್ತು ದೂರುದಾರ ಇಂಟೆಕ್ ರಾಜು ಇವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಇತ್ತ ಶಿಕ್ಷಣ ಇಲಾಖೆ ನೇಮಕಾತಿ ಪ್ರಾಧಿಕಾರದಲ್ಲೂ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ಲೋಕೇಶ್ ಗೌಡ ನೀಡಿದ್ದ ವಂಶ ವೃಕ್ಷದಲ್ಲಿ ಲಕ್ಷ್ಮಣೇ ಗೌಡ ಹೆಸರು ಕೈಬಿಟ್ಟಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟೀಸಿ ಜಾರಿ ಮಾಡಿದ್ದರು. ಸಮರ್ಪಕ ಉತ್ತರ ನೀಡುವ ಬದಲು ಲೋಕೇಶ್ ಗೌಡ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಹಾಗೂ ಮಾನನಷ್ಟ ಮೊಕದಮ್ಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು.
ಇಲಾಖೆ ಪ್ರಕರಣದ ದೂರಿನ ಅಂಶಗಳಲ್ಲಿ ಲೋಕೇಶ್ ಗೌಡ ಎಂಬ ವ್ಯಕ್ತಿಯ ಮೇಲೆ ನಖಲಿ ವ್ಯಕ್ತಿಎಂಬ ಆರೋಪವಿದ್ದು, ಲೋಕೇಶ್ ರವರ ಹೆಸರಿನ ಕೆಲವು ದಾಖಲೆಗಳನ್ನು ನೀಡಿರುವುದು ಪ್ರಕರಣಕ್ಕೆ ಪ್ರಮುಖದಾಖಲೆಯಾಗಿರುವುದಿಲ್ಲ. ಹೀಗಾಗಿ ಲಕ್ಷಣೇಗೌಡ ಎಂಬ ಸಹೋದರನ ಬಗ್ಗೆ ಈವರೆವಿಗೂ ಸಹ ಯಾವುದೇ ಪ್ರಸ್ತಾಪವಿರುವುದಿಲ್ಲ. ಇದರಿಂದಾಗಿ ಇಲಾಖೆಗೆ ದೂರಿನ ಅಂಶಗಳು ನೈಜವೆಂದು ಮೇಲ್ನೋಟಕ್ಕೆ ಕಾಣುತಿದ್ದು, ಲೋಕೇಶ್ ಮೇಲಿನ ಆರೋಪಗಳ ಬಗ್ಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮತ್ತು ಕ್ರಮದ ಅವಶ್ಯಕತೆ ಇರುವುದರಿಂದ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಿ ಬಿ.ಇ.ಓ.ರಿಗೆ ಡಿಡಿಪಿಐರವರು ಆದೇಶಿಸಿದ್ದರ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಮುದ್ದನಹಳ್ಳಿ ಪಿರಿಯಾಪಟ್ಟಣ ವ್ಯಾಪ್ತಿಗೊಳಪಡುವುದರಿಂದಾಗಿ ಪಿರಿಯಾಪಟ್ಟಣ ಠಾಣೆಯಲ್ಲಿ ಬಿಇಓ ನಾಗರಾಜ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಲೋಕೇಶ್‌ನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.