Advertisement

ಹಣದ ವಿಚಾರದಲ್ಲಿ ಗಲಾಟೆ : ಸಂಬಂಧಿಯನ್ನೇ ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆ

04:09 PM Sep 18, 2021 | Team Udayavani |

ಹುಣಸೂರು : ಹಳೇ ದ್ವೇಶದ ಹಿನ್ನೆಲೆಯಲ್ಲಿ ಸಂಬಂಧಿಯನ್ನೇ ಮಾರಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿ. ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಧರ್ಮಾಪುರದಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಧರ್ಮಾಪುರ ಗ್ರಾಮದ ಮರಿದೇವನಾಯ್ಕರ ಪುತ್ರ ರಾಜನಾಯಕ ( 50) ಕೊಲೆಯಾದಾತ. ಆರೋಪಿತ ಈತನ ಸಂಬಂಧಿ ಅದೇ ಗ್ರಾಮದ ದೇವನಾಯ್ಕರ ಪುತ್ರ ಕೆಂಡಗಣ್ಣ ನಾಯಕ. ಇದೀಗ ಪೋಲೀಸರಿಗೆ ಶರಣಾಗಿದ್ದಾನೆ.

ಘಟನೆ ವಿವರ;

ಮೃತ ರಾಜನಾಯ್ಕನಿಂದ ಆರೋಪಿತ ಕೆಂಡಗಣ್ಣನಾಯ್ಕ 50 ಸಾವಿರ ಹಣ ಸಾಲ ಪಡೆದಿದ್ದು ಹಣದ ವಿಚಾರದಲ್ಲಿ ಆಗಾಗ್ಗೆ ಗಲಾಟೆಯಾಗುತ್ತಿತ್ತು ನೆನ್ನೆ ಹಣ ಕೊಡುವ ಕೊನೆಯ ದಿನವಾಗಿತ್ತು ಈ ವಿಚಾರದಲ್ಲಿ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಹಣ ಕೇಳುವ ವಿಚಾರದಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿ ಕೆಂಡಗಣ್ಣನಾಯ್ಕ ಮಚ್ಚಿನಿಂದ ರಾಜನಾಯ್ಕನ ತಲೆ ಮತ್ತು ಹೊಟ್ಟೆ ಬಾಗಕ್ಕೆ ತೀವ್ವಾಗಿ ಹಲ್ಲೆ ನಡೆಸಿದ ಪರಿಣಾಮ ರಾಜನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿತ ಕೆಂಡಗಣ್ಣನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಇದನ್ನೂ ಓದಿ :ತಾಕತ್ತಿದ್ದರೆ ನಿಮ್ಮ ಕ್ಷೇತ್ರದ ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವು ಮಾಡಿ: ಸಿಎಂ ಗೆ ಸವಾಲು

ಈ ಸಂಬಂದ ರಾಜನಾಯ್ಕರ ಸಹೋದರ ಜವರನಾಯಕ ಹಣಕಾಸಿನ ವ್ಯವಹಾರದಲ್ಲಿ ಹಲವಾರು ಬಾರಿ ಜಗಳಗಳಾಗಿದ್ದು. ನಿನ್ನೆ ರಾತ್ರಿ 10 ರ ಸಮಯದಲ್ಲಿ ನಮ್ಮ ಮನೆಯ ಸಮೀಪ ಹಣಕಾಸು ವಿಚಾರದಲ್ಲಿ ಇಬ್ಬರಿಗೂ ಜಗಳ ನಡೆದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಮೃತದೇಹವು ಮೈಸೂರಿನ ಕೆಆರ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ ಪಿ ರವಿಪ್ರಸಾದ್. ಇನ್ಸ್ ಪೆಕ್ಟರ್ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next