ಹುಣಸೂರು : ತಂಬಾಕು ಸಸಿಗಳಿಗೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿ ಸುಮಾರು 70 ಸಾವಿರಕ್ಕೂ ಹೆಚ್ಚು ತಂಬಾಕು ನಾಟಿ ಸಸಿಗಳು ಸತ್ತುಹೋಗಿರುವ ಘಟನೆ ಹುಣಸೂರು ಸಮೀಪದ ತಿಪ್ಪಲಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತಿಪ್ಪಲಾಪುರ ಗ್ರಾಮದ ವೀರೇಶ್ ಎಂಬ ರೈತ ತನ್ನ ಜಮೀನಿನಲ್ಲಿ ಕಳೆದ ಎರಡು ತಿಂಗಳಿನಿಂದ ತಂಬಾಕು ಸಸಿ ಮಡಿಗಳನ್ನು ಟ್ರೆನಲ್ಲಿ ಇಟ್ಟು ಪೋಷಿಸಿದ್ದರು. ಅರ್ಧದಷ್ಟು ಸಸಿಗಳನ್ನು ನಾಟಿ ಮಾಡಿದ್ದರು, ಉಳಿದ 70 ಸಾವಿರ ಸಸಿಗಳನ್ನು ನಾಟಿ ಮಾಡಲು ತಯಾರಿ ಮಾಡಿಕೊಂಡಿದ್ದರು. ಆದರೆ ಸೋಮವಾರ ಜಮೀನಿಗೆ ತೆರಳಿ ನೋಡಿದ ವೇಳೆ ಜಮೀನಿನಲ್ಲಿ ನಾಟಿ ಮಾಡಿದ್ದ ಸಸಿಗಳು ಹಾಗೂ ಟ್ರೆನಲ್ಲಿದ್ದ ಸಸಿಗಳಲ್ಲಿ ಬಹುತೇಕ ತಂಬಾಕು ಸಸಿಗಳು ಸತ್ತು ಹೋಗಿದ್ದವು.
ಘಟನೆಯ ವಿವರ: ತಂಬಾಕು ಸಸಿಗಳಿಗೆ ನೀರು ಹಾಕಲು ಗುಂಡಿ ತೆಗೆದು ನೀರು ತುಂಬಿಸಲಾಗಿತ್ತು ದುಷ್ಕರ್ಮಿಗಳು ರಾತ್ರಿಯ ವೇಳೆ ನೀರಿನ ಗುಂಡಿಗೆ ಕಳೆನಾಶಕ ಮಿಶ್ರಣ ಮಾಡಿ ಹೋಗಿದ್ದಾರೆ. ರೈತ ವೀರೇಶ್‌ರ ಅರಿವಿಗೆ ಬಾರದೆೆ ಬೆಳಗ್ಗೆ ನೀರನ್ನು ತಂಬಾಕು ಮಡಿ ಸಸಿಗಳಿಗೆ ನೀರು ಹಾಕಿದ್ದಾರೆ. ದಿನಕಳೆದಂತೆ ಸಂಪೂರ್ಣವಾಗಿ ಜೋತು ಬರುವುದನ್ನು ಕಂಡ ರೈತ ಕಂಗಾಲಾಗಿದ್ದಾನೆ.
ತಂಬಾಕು ಮಡಿ ಸಸಿ ಮಾಡಲು ಕನಿಷ್ಠ ಒಂದು ಸಸಿಗೆ 1ರೂ ಖರ್ಚಾಗಲಿದೆ. ಸಾಲಸೋಲ ಮಾಡಿ ತಂಬಾಬು ಸಸಿಗಳನ್ನು ನಾಟಿ ಮಾಡಲು ಅಣಿಗೊಳಿಸಿದ್ದು, ಕಿಡಿಗೇಡಿಗಳು ನೀರಿಗೆ ಕಳೆ ನಾಶಕ ಬೆರೆಸಿದ್ದರಿಂದಾಗಿ ನೀರು ಹಾಕಿದ ವೇಳೆ ತಂಬಾಕು ಸಸಿಗಳು ಸತ್ತು ಹೋಗಿದೆ, ಸುಮಾರು ಒಂದು ಲಕ್ಷರೂ ನಷ್ಟು ಲುಕ್ಸಾನಾಗಿದ್ದು, ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ರೈತ ವೀರೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ : ಚಂದ್ರ, ಮಂಗಳನ ಬಳಿಕ ಶುಕ್ರನ ತಿಳಿಯಲು ನೌಕೆಯನ್ನು ಸಿದ್ಧಪಡಿಸುತ್ತಿರುವ ಇಸ್ರೋ