ಹುಣಸೂರು : ವರುಣಾ ನಾಲೆಯಲ್ಲಿ ಈಜಲು ಹೋದ ಯುವಕನೊರ್ವ ನೀರುಪಾಲಾಗಿರುವ ಘಟನೆ ರವಿವಾರ ಸಂಭವಿಸಿದೆ.
ಹುಣಸುಇರು ತಾಲೂಕು ಬಿಳಿಕೆರೆ ಹೋಬಳಿಯ ಹಂದನಹಳ್ಳಿಯ ಅಭಿಷೇಕ್ (24) ಸಾವನ್ನಪ್ಪಿದ ದುರ್ದೈವಿ.
ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರಿಯಾಗಿರುವ ಅಭಿಷೇಕ್ ವರುಣಾ ನಾಲೆ ಬಳಿಯ ತಮ್ಮ ಜಮೀನು ನೋಡಿಕೊಂಡು ಬರಲು ತೆರಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ನಾಲೆಯಲ್ಲಿ ಈಜಲು ನೀರಿಗಿಳಿದಿದ್ದಾರೆ, ನಾಲೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದ ಪರಿಣಾಮ ಕೊಚ್ಚಿ ಹೋಗಿದ್ದಾರೆ.
ಯುವಕನ ಕೂಗಾಟ ಕೇಳಿದ ಅಕ್ಕಪಕ್ಕದ ಜಮೀನಿನವರು ಧಾವಿಸಿದರಾದರೂ ಅಭಿಷೇಕ್ ನೀರಿನಲ್ಲಿ ಮುಳುಗಿದ್ದ.
ತಕ್ಷಣವೇ ಈಜುಗಾರರು ನೀರಿಗಿಳಿದು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ತಡರಾತ್ರಿ ಅಭಿಷೇಕ್ ಶವ ಪತ್ತೆಯಾಗಿದೆ.
ಇದನ್ನೂ ಓದಿ : ನೇರ ತೆರಿಗೆ ಸಂಗ್ರಹ ಶೇ.23ರಷ್ಟು ಹೆಚ್ಚಳ: ಪ್ರಸಕ್ತ ವರ್ಷದಲ್ಲಿ 7 ಲಕ್ಷ ಕೋಟಿ ರೂ. ಸಂಗ್ರಹ