ಹುಣಸೂರು : ಹುಣಸೂರು ತಾಲೂಕಿನಲ್ಲಿ ಬಿರುಗಾಳಿ ಗುಡುಗು ಸಹಿತ ಭಾರಿ ಮಳೆಗೆ ಗಾವಡಗೆರೆ ಭಾಗದಲ್ಲಿ 10 ಮನೆಗಳಿಗೆ ಹಾನಿಯಾಗಿದ್ದರೆ, ಚಿಲ್ಕುಂದದಲ್ಲಿ ಸಿಡಿಲು ಬಡಿದು ತೆಂಗಿನಮರ ಭಸ್ಮವಾಗಿದೆ.
ಚಿಲ್ಕುಂದ ಗ್ರಾಮದ ಗುರುನಾಥ್ ರವರಿಗೆ ಸೇರಿದ ತೆಂಗಿನಮರಕ್ಕೆ ಸಿಡಿಲು ಬಡಿದು ಸುಟ್ಟು ಭಸ್ಮವಾಗಿದ್ದರೆ, ಗಾವಡಗೆರೆ ಹೋಬಳಿಯ ಕಳ್ಳಿ ಕೊಪ್ಪಲು ಗ್ರಾಮ ಒಂದರಲ್ಲೇ 10ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿಗೆ ಹಾನಿಯಾಗಿದ್ದು, ಇಡೀ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆನೀರಿಗೆ ಮನೆಯೊಳಗಿದ್ದ ದವಸ ಧಾನ್ಯಗಳು ತೋಯ್ದುಹೋಗಿದೆ, ಸ್ಥಳಕ್ಕೆ ಆರ್.ಐ. ಅಜ್ಮಲ್, ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳ್ಳಿಕೊಪ್ಪಲು ಗ್ರಾಮದ ಕೃಷ್ಣೇಗೌಡ, ರಾಮಸ್ವಾಮಿಗೌಡ, ಕಾಮಾಕ್ಷಮ್ಮ, ಮರಿಮಲೇಗೌಡ, ಕುಸುಮಾಲಮ್ಮ, ನಾಗರಾಜೇಗೌಡ, ಪುಟ್ಟರಾಜೇಗೌಡ, ಗಿಡ್ಡೇಗೌಡ, ಲಕ್ಕೇಗೌಡ, ಸೇರಿದಂತೆ 10ಕ್ಕೂ ಹೆಚ್ಚು ಮನೆಯ ಮೇಲ್ಚಾವಣಿ ಹಾನಿಯಾಗಿದ್ದು ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆಂದು ತಾಹಸಿಲ್ದಾರ್ ಡಾ.ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ : ಲಂಡನ್: ಭಾರತೀಯ ಮೂಲದ ವೈದ್ಯನಿಂದ 48 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ