ಹುಣಸೂರು : ಹುಣಸೂರು ತಾಲೂಕಿನಲ್ಲಿ ಮಳೆಯ ಅನಾಹುತ ಮುಂದುವರೆದಿದ್ದು. ಸಿಡಿಲಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ತಾಲೂಕಿನ ಕರ್ಣಕುಪ್ಪೆಯಲ್ಲಿ ನಡೆದಿದೆ.
ತಾಲೂಲಿನ ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾಮದ ಸರಕಾರಿ ಶಾಲೆಯಲ್ಲಿ ಮುಖ್ಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಲೇ. ಗೋವಿಂದರಾಜುರ ಪತ್ನಿ ಗಾಯಿತ್ರಮ್ಮ( 55) ಮೃತಪಟ್ಟಾಕೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಭಾನುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಗಿದ್ದು. ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಮಹಿಳೆಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಗಾಯತ್ರಮ್ಮ ಮಾತ್ರ ಇದ್ದು. ಸೋಮವಾರ ಗ್ರಾಮದ ಮನೊಯೊಂದರಲ್ಲಿ ಶುಭಕಾರ್ಯ ನಡೆದಿತ್ತು. ಈ ಸಮಾರಂಭಕ್ಕೂ ಗಾಯತ್ರಮ್ಮ ಹೊಗದ ಕಾರಣ ಊಟದ ವೇಳೆ ಸಮಾರಂಭದ ಮನೆಯವರು ಗಾಯತ್ರಮ್ಮನನ್ನು ಕರೆಯಲು ಹೋದ ವೇಳೆ ಪಾತ್ರೆ ತೊಳೆಯುತ್ತಿದ್ದ ಸ್ಥಳದಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.
ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಗಾಯಿತ್ರಮ್ಮನವರ ದೇಹ ಕರಕಲಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲಾಗಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ : ಚುನಾವಣಾ ಅಖಾಡಕ್ಕೆ ಧುಮುಕಿದ ಮಂಗಳೂರಿನ ಮೀರಾ