Advertisement

ಹುಣಸೂರು : ತಂದೆಯಿಂದಲೇ ನಡೆಯಿತಾ 4 ವರ್ಷದ ಮಗನ ಅಪಹರಣ ?

09:15 PM Apr 03, 2022 | Team Udayavani |

ಹುಣಸೂರು : ಹೆತ್ತ ತಂದೆಯೇ ತನ್ನ ಮಗನನ್ನು ಅಪಹರಿಸಿರುವ ಕುರಿತು ಹುಣಸೂರು ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ.

Advertisement

ನಗರದ ನ್ಯೂ ಮಾರುತಿ ಬಡಾವಣೆಯ ಬಾಲಕ ಯಾಸಿನ್ (4 ವರ್ಷ) ಅಪಹರಣಕ್ಕೊಳಗಾದಾತ.

ನ್ಯೂ ಮಾರುತಿ ಬಡಾವಣೆಯ ಸುಮೇರಾಳನ್ನು ಮೈಸೂರಿನ ಜಾಫರ್ ಷರೀಫ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ‌ ಕಲಹದಿಂದ ವಿಚ್ಚೇದನವಾಗಿ ಸುಮೇರಾ ತನ್ನ ಮಗನೊಂದಿಗೆ ತಂದೆ ಮನೆಯಲ್ಲೇ ವಾಸವಾಗಿದ್ದಳು.

ಈ ನಡುವೆ ಜಾಫರ್ ಷರೀಪ್ ಮತ್ತೊಂದು ಮದುವೆಯಾಗಿದ್ದಾರೆ. ಆದರೆ ಇಂದು ಜಾಫರ್ ನ್ಯೂ ಮಾರುತಿ ಬಡಾವಣೆಯಲ್ಲಿರುವ ಸುಮೇರಾ ಅವರ ಮನೆಗೆ ಕಾರಿನಲ್ಲಿ ಬಂದಿದ್ದು ಮನೆಯಲ್ಲಿದ್ದ 4 ವರ್ಷದ ಪುತ್ರ ಯಾಸಿನ್ ಬಳಿ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋದವರು ಮತ್ತೆ ವಾಪಾಸ್ ಬಂದಿರಲಿಲ್ಲ.

ಇತ್ತ ಮಗ ಕಾಣದೆ ಎಲ್ಲಾ ಕಡೆ ಹುಡುಕಾಡಿದ ಸುಮೇರಾ ಜಾಫರ್ ತನ್ನ ಮಗನನ್ನು ಅಪಹರಣ ಮಾಡಿದ್ದಾನೆ ಎಂದು ಹುಣಸೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ .

Advertisement

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಾಫರ್ ಷರೀಪ್ ಪತ್ತೆಗೆ ಬಲೆ ಬಿಸಿದ್ದಾರೆ.

ಇದನ್ನೂ ಓದಿ : ಯುಗಾದಿಯ ಮರುದಿನ ಕುವೆಂಪು ವಿವಿಗೆ ಗಜರಾಜನ ಭೇಟಿ! ವಿದ್ಯಾರ್ಥಿಗಳಿಗಳು, ಸಿಬ್ಬಂದಿ ಆತಂಕದಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next