Advertisement
ನೀಲಕಂಠರಾಯನಗಡ್ಡಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಕೃಷ್ಣಾನದಿ ದಾಟಿಕೊಂಡೇ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ಎಷ್ಟೋ ಚುನಾವಣೆಗಳು ಬಂದರೂ ಗ್ರಾಮಸ್ಥರಿಗೆ ಯಾವುದೇ ಜಾಗೃತಿ ಕಾರ್ಯಕ್ರಮ ನಡೆಸಿ ಪ್ರಜ್ಞೆ ಮೂಡಿಸಿರಲಿಲ್ಲ. ಈ ಬಾರಿ ಲೋಕಸಭಾ ಚುನಾವಣಾ ಉದ್ದೇಶ ಹಾಗೂ ಮತದಾನದ ಶೇಕಡಾವಾರು ಫಲಿತಾಂಶ ಹೆಚ್ಚಿಸುವ ಸಲುವಾಗಿನೀಲಕಂಠರಾಯನಗಡ್ಡಿಗೆ ಕಲಾ ತಂಡದೊಂದಿಗೆ ಸ್ವೀಪ್ ಕಮಿಟಿ ಅಧ್ಯಕ್ಷೆ ಕವಿತಾ ಮನ್ನಿಕೇರಿ ತೆರಳಿ ಜಾಗೃತಿ ಮೂಡಿಸಿದರು.
ಗ್ರಾಮಸ್ಥರು ಬರುವಿಕೆಗಾಗಿ ಕಾಯುತ್ತಿದ್ದರು. ಅಲ್ಲಿನ ಜನರ ವೇಷ ಮತ್ತು ಮನೆಗಳ ನೋಡಿ ಆಶ್ಚರ್ಯವಾದರು. ಹಾಗೇ ಜಾಗೃತಿ ವೇಳೆ ಹಿರಿಯ ಮತದಾರರಿಗೆ ಸನ್ಮಾನ ಮಾಡಿ ಮಾನವೀಯತೆ ಮೆರೆದ ಅವರು ಅವರೊಂದಿಗೆ ಕುಳಿತು ಮತದಾನದ ಜಾಗೃತಿ ಕಾರ್ಯಕ್ರಮ ವೀಕ್ಷಿಸಿದರು. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎನಿಸುವಂತಿತ್ತು. ಜಾಗೃತಿ ಮೂಡಿಸಿದ ನಂತರ ರಾತ್ರಿ 8:00ಕ್ಕೆ ಮರಳಿ ಯಾದಗಿರಿಯತ್ತ ಪ್ರಯಾಣಿಸಲು ಕಲ್ಲು ಮುಳ್ಳು ತಾಗಿಸಿಕೊಂಡು ಒಂದೊಂದು ಹೆಜ್ಜೆ ಮೆಲ್ಲಗೆ ಇಡುತ್ತ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನಡೆದು ಬಂದರು.
Related Articles
Advertisement
ನೀರಿಗಾಗಿ ಅಳಲು ತೋಡಿಕೊಂಡ ಜನರು: ನಮಗೆ ಕುಡಿಯಲು ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿನ ಜನರು ಅಳಲು ತೋಡಿಕೊಂಡರು. ಪ್ರತಿಜ್ಞಾನವಿಧಿ ಬೋಧನೆ: 40 ಕುಟುಂಬ ಇರುವ ಇಲ್ಲಿ 132 ಮತಗಳು ಇವೆ. ಹೀಗಾಗಿ ಎಲ್ಲ ಮತಗಳು ಚಲಾವಣೆ ಆಗಲೇಬೇಕು ಎಂಬ ನಿರ್ಧಾರದೊಂದಿಗೆ ಹಿರಿಯ ಮತದಾರರು ಸೇರಿದಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಗುಳೆ ಹೋದ ಎಲ್ಲರನ್ನು ಮರಳಿ ಕರಿಸಿ ಮತದಾನ ಮಾಡಬೇಕು. ವೃದ್ಧರಿಗೆ, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತದಾನ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಟ್ಟರು.
ಬಾಲಪ್ಪ ಎಂ. ಕುಪ್ಪಿ