Advertisement

ಬಿಸಲಿನ ತಾಪಕ್ಕೆ ಜನರು ತತ್ತರ

11:23 AM Apr 12, 2019 | Naveen |

ಹುಣಸಗಿ: ಬೇಸಿಗೆ ಬಿಸಿಲಿನ ಧಗೆ ಹೆಚ್ಚಾದಂತೆ ಜನರು ತಂಪು ಪಾನೀಯಗಳಿಗೆ ಮೊರೆ ಹೋಗುವಂತಾಗಿದೆ.

Advertisement

ದಿನ ದಿನಕ್ಕೆ ಬಿಸಲಿನ ಕಾವು ಹೆಚ್ಚಾಗುತ್ತಿದೆ.
ಒಂದು ಕಡೆ ಧಗೆ ಮತ್ತು ಬಿಸಿಲು ತಾಳದೇ ವಿವಿಧ ರೀತಿಯ ತಂಪು ಪಾನೀಯ
ಕುಡಿಯುವುದು ಅಲ್ಲಲ್ಲಿ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದರಿಂದ ಪಟ್ಟಣದಲ್ಲಿ ಬಿಸಲಿನ ಹೊಡೆತಕ್ಕೆ ಜನರು ತತ್ತರಿಸಿದ್ದಾರೆ. ವಿಶ್ರಾಂತಿ ಪಡೆಯಲು ಮರಗಳ ನೆರಳಿನ ಕೊರತೆ ಎದ್ದು ಕಾಣುತ್ತಿದೆ. ರಸ್ತೆ ಬದಿ ಎಲ್ಲೆಯೂ ಮರಗಳು ಇಲ್ಲ. ಹಾಗಾಗಿ ಜನರು ರಸ್ತೆಯಲ್ಲಿ ಸಂಚರಿಸುವುದು ಕಡಿಮೆಯಾಗಿದೆ. ಇನ್ನೂ ಹೊರಗಡೆ ಹೋಗಬೇಕಾದರೆ ಛತ್ರಿ
ಹಿಡಿಯುವುದು ಅನಿವಾರ್ಯವಾಗಿದೆ. ಇಲ್ಲದಿದ್ದರರೆ ದೈನಂದಿನ ಕೆಲಸ ಕಾರ್ಯಗಳನ್ನು ಬೆಳಗ್ಗೆ ಪೂರ್ಣಗೊಳಿಸಬೇಕು. ಬೆಳಗ್ಗೆ 9:00 ಆಗುತ್ತಲೇ ಸೂರ್ಯನ ತಾಪ ಸಹಿಸಲಾಗುವುದಿಲ್ಲ. ಸಂಜೆ ಆದಂತೆ ನಿಟ್ಟುಸಿರು ಬೀಡುವಂತಾಗಿದೆ ಎನ್ನುತ್ತಾರೆ ಹುಣಸಗಿ: ಬಿಸಿಲಿನ ತಾಪದಿಂದ ರಸ್ತೆಯಲ್ಲಿ ವಿರಳ ಸಂಚಾರ. ನಾಗರಿಕರು.

ಹಗಲಿನಲ್ಲಿ ಬಿಸಿಲಿನ ಸಮಸ್ಯೆಯಾದರೆ ರಾತ್ರಿ ವೇಳೆ ಮನೆಯಲ್ಲಿ ಫ್ಯಾನ್‌ ಮತ್ತು
ಏರಕೂಲರ್‌ ಹಚ್ಚಿ ಮಲಗಬೇಕಿದೆ. ವಿದ್ಯುತ್‌ ಕೈಕೊಟ್ಟರೆ ನಿದ್ರಿಸುವುದು ಕಷ್ಟ.
ಬಿಸಿಲಿನ ಝಳಕ್ಕೆ ಜನರು ಮಾತ್ರವಲ್ಲದೇ ಪ್ರಾಣಿಗಳು ಕೂಡ ತತ್ತರಿಸುತ್ತಿವೆ. ಮೇವು ತಿನ್ನದೆ ಹೊಲಗಳಲ್ಲಿ ಮರಗಳ ನೆರಳಿನ ಆಸರೆ ಹುಡುಕುಂವತಾಗಿದೆ.

ಮರಗಳು ಜಾಸ್ತಿ ಇಲ್ಲ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಮರಗಳು ಜಾಸ್ತಿ ಬೆಳೆಸಲಾಗಿಲ್ಲ. ಮರಗಳ ಸಂಖ್ಯೆಯೂ ವಿರಳವಾಗಿದೆ. ಹಾಗಾಗಿ ಹೆಚ್ಚಿನ ತಾಪಮಾನ ನೇರವಾಗಿ ಭೂಮಿಗೆ ಬೀಳುವುದರಿಂದ
ಜನರ ಮೇಲೆ ಇದರ ಪರಿಣಾಮ ಬೀರುತ್ತಿದೆ. ಮರಗಳು ಹೆಚ್ಚು ಬೆಳೆಸಿದಲ್ಲಿ ಸುತ್ತಮುತ್ತಲಿನ ವಾತಾವರಣ ತಂಪಾಗಿಸಬಹುದು. ಈ ಬಗ್ಗೆ ಪ್ರತಿಯೊಬ್ಬರಲ್ಲಿಯು ಅರಣ್ಯ ಇಲಾಖೆ ಅಥವಾ ಸಂಬಂಧಿ ಸಿದ ಅಧಿ ಕಾರಿಗಳು ಜಾಗ್ರತೆ ಮೂಡಿಸುವುದು ಅಗತ್ಯವಾಗಿದೆ.

ನಮ್ಮ ಸುತ್ತಲಿನ ಪ್ರದೇಶ ಹಾಗೂ ರಸ್ತೆ ಬದಿಯಲ್ಲಿ ಮರಗಳನ್ನು ಹೆಚ್ಚಾಗಿ ಬೆಳೆಸಬೇಕಿದೆ. ಮರಗಳು ಇದ್ದಾಗ ತಂಪಾದ ಗಾಳಿ ಮತ್ತು ಜನರಿಗೆ ನೆರಳಿನ
ರಕ್ಷಣೆ ಸಿಗಲಿದೆ. ಈ ಬಗ್ಗೆ ಅರಣ್ಯ ಇಲಾಖೆ ವತಿಯಿಂದ ಮುಂಬರುವ
ದಿನಗಳಲ್ಲಿ ಹೆಚ್ಚು ಗಿಡ ಬೆಳೆಸಲು ಮುಂದಾಗಬೇಕಿದೆ.
.ಚನ್ನಕುಮಾರ ಆರ್‌. ದಿಂಡವಾರ,
ಪರಿಸರ ಪ್ರೇಮಿ

Advertisement

ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next