ಹುಣಸಗಿ: ಸಾಧಿಸುವ ಛಲ ಮಕ್ಕಳು ಬೆಳೆಸಿಕೊಂಡಾಗ ಮಾತ್ರ ನಿಶ್ಚಿತ ಗುರಿ ಮುಟ್ಟಲು ಸಾಧ್ಯ ಎಂದು ಬಸವ ಪೀಠದ ಪೀಠಾಧಿಪತಿ ವೃಷಬೇಂದ್ರ ಅಪ್ಪ ಹೇಳಿದರು.
ಕೊಡೇಕಲ್ಲ ಗ್ರಾಮದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಸುರಪುರ ತಾಲೂಕು ನೇಕಾರರ ಸೌಹಾರ್ದ ಒಕ್ಕೂಟದಿಂದ ರವಿವಾರ ಹಮ್ಮಿಕೊಂಡಿದ್ದ ನೇಕಾರ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
2018-19ನೇ ಸಾಲಿನ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ನೇಕಾರ ಸಮಾಜದ ಮಕ್ಕಳು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಮಾದರಿಯಾಗಿದ್ದು, ಮಕ್ಕಳನ್ನು ಗುರುತಿಸಿ ತಾಲೂಕು ನೇಕಾರರ ಒಕ್ಕೂಟ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಶಾಮಸುಂದರ ಜ್ಯೋಶಿ ಮಾತನಾಡಿ, ಇಂದು ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜತೆಗೆ ಮಹಾನ್ ರಾಷ್ಟ್ರ ನಾಯಕರ ಮತ್ತು ಶರಣರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರರ ಲೇಸನೆ ಬಯಸಬೇಕು. ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆ ಕೂಡ ಮುಂದೆ ಬರಲು ಪ್ರಯತ್ನಿಸಬೇಕು. ಸನ್ಮಾನ ಕಾರ್ಯದಿಂದ ಪಾಲಕ-ಪೋಷಕರಲ್ಲಿ ಹರ್ಷ ಮೂಡಿದೆ ಎಂದರು.
ವಡವಡಿಗಿ ನಂದಿಮಠದ ಮಲ್ಲಿಕಾರ್ಜುನ ಶ್ರೀ, ನೀಲಕಂಠಸ್ವಾಮಿ ವಿರಕ್ತಮಠ ನೇತೃತ್ವ ವಹಿಸಿದ್ದರು. ರಾಣಿ ರಂಗಮ್ಮ ಜಹಾಗೀರದಾರ ಉದ್ಘಾಟಿಸಿದರು. ನೇಕಾರ ಒಕ್ಕೂಟದ ತಾಲೂಕು ಅಧ್ಯಕ್ಷ ವಿ.ಎಸ್. ಹಾವೇರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ರಂಗನಾಥ ದೊರೆ, ಕುಮಾರಸ್ವಾಮಿ ಗುಡ್ಡೋಡಗಿ, ಗ್ರಾಪಂ ಅಧ್ಯಕ್ಷೆ ಅಯ್ಯಮ್ಮ ಹೊಳೆಪ್ಪ ಮ್ಯಾಗೇರಿ, ಬಸಪ್ಪ ಪಂಜಗಲ್, ರವೀಂದ್ರ ಅಂಗಡಿ, ಹಣಮೇಶಗೌಡ ರುಕ್ಮಾಪುರ, ರಾಜನಕೋಳೂರು ಗ್ರಾಪಂ ಅಧ್ಯಕ್ಷೆ ಉಮಾ ಶರಣಗೌಡ ಉಳ್ಳೇಸೂರು, ಬಸವರಾಜಪ್ಪಗೌಡ ಹೊಸ ಪೂಜಾರಿ, ನಿಂಗಣ್ಣ ರಾಯಚೂರು, ಸಂಗಪ್ಪ ಶಿವಪುರ, ಸಂಗಮೇಶ ಅಡ್ಡಿ, ಬಸಣ್ಣ ಗೋಡ್ರಿ, ನಾಗರತ್ನಾ ಜಾಲಿಗಿಡದ್, ಎಸ್.ಬಿ. ಅಡ್ಡಿ, ತಿಪ್ಪಣ್ಣ ದ್ಯಾಮನಾಳ ಸೇರಿದಂತೆ ನೇಕಾರ ಸಮಾಜದ ಮಕ್ಕಳು ಹಾಗೂ ಪಾಲಕ-ಪೋಷಕರು, ಗುರು-ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು. ಎಸ್.ಬಿ. ಪಂಜಗಲ್ ಸ್ವಾಗತಿಸಿದರು. ಕೆ.ಬಿ. ಗಡ್ಡದ್ ನಿರೂಪಿಸಿದರು. ಪ್ರಕಾಶ ಬಾಚಿಹಾಳ ವಂದಿಸಿದರು.