ಹುಣಸಗಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಎಳೆಯ ಮನಸ್ಸುಗಳನ್ನು ತಿದ್ದಿ ತಿಡಿ ಅವರನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಅವಿರತ ಶ್ರಮಿಸುತ್ತಾರೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ವಲ್ ಹೇಳಿದರು.
ವಜ್ಜಲ್ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಂತಗೌಡ ಪಾಟೀಲ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದರು.
ನಂತರ ಮಾತನಾಡಿದ ಕಲಬುರಗಿ ಜಿಲ್ಲೆಯ ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ, ಯಾವೊಬ್ಬ ವ್ಯಕ್ತಿ ಎಲ್ಲರೊಂದಿಗೆ ಗುರಿತಿಸುಕೊಳ್ಳುವಂತಾಗಲು ಅವರಿಗೆ ಕಲಿಸಿದ ಶಿಕ್ಷಕನ ಪಾತ್ರ ಮುಖ್ಯವಾಗಿರುತ್ತದೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆದು ದೊಡ್ಡ ವ್ಯಕ್ತಿಯಾಗಲು ಶಿಕ್ಷಣ ಮುಖ್ಯ. ಆದ್ದರಿಂದ ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ವಯೋ ನಿವೃತ್ತಿ ಹೊಂದಿದ ಶಿಕ್ಷಕ ಶಾಂತಗೌಡ ಪಾಟೀಲ ಮಾತನಾಡಿ, ಒಬ್ಬ ಶಿಕ್ಷಕನಾಗಿ ಮಕ್ಕಳಿಗೆ ಉತ್ತಮ ರೀತಿ ಬೋಧನೆ ಮಾಡಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.
ಮುಖಂಡ ನಾಗಣ್ಣ ಸಾಹು ದಂಡಿನ್ ಮಾತನಾಡಿ, ಸೇವೆ ಸಲ್ಲಿಸಿದ ಎಲ್ಲ ಗ್ರಾಮಗಳು ಜನರು ಶಿಕ್ಷಕರನ್ನು ಸನ್ಮಾನಿಸಲು ಆಗಮಿಸಿರುವುದು ನೋಡಿದರೆ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ರೆಡ್ಡಿ ವೀರಶೈವ ಸಮಾಜದ ತಾಲೂಕಾಧ್ಯಕ್ಷ ಸಂಗನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರ ಸೇವೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ನಿಂಗಣ್ಣ ಬಳಿ, ಎನ್.ಸಿ. ಪಾಟೀಲ, ವೀರೇಶ ಚಿಂಚೋಳಿ, ಸಂಗಣ್ಣ ವೈಲಿ, ಆರ್.ಎಂ. ರೇವಡಿ, ಚನ್ನಯ್ಯಸ್ವಾಮಿ, ಶಿವನಗೌಡ ಚನ್ನೂರ, ಅಮರೇಶ ಬಸನಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಸಾಬಣ್ಣ ಗಿಂಡಿ, ಕೇತ್ರ ಶೀಕ್ಷಣಾಧಿಕಾರಿ ನಾಗರತ್ನಾ ಓಲೇಕಾರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಪೊಲೀಸ್ ಪಾಟೀಲ ಸೇರಿದಂತೆ ತಾಲೂಕು ನೌಕರ ಸಂಘದ ಅಧ್ಯಕ್ಷರು, ಶಿಕ್ಷಕರು, ವಿವಿಧ ಗ್ರಾಮಗಳ ಮುಖಂಡರು ಇದ್ದರು. ನಾಗನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ರಮೇಶ ಪಾಟೀಲ ವಂದಿಸಿದರು.