Advertisement

ಕೋವಿಡ್ ಸುರಕ್ಷತೆಗೆ ಮಾಸ್ಕ್- ಸಾನಿಟೈಜರ್‌ ಉಪಯೋಗಿಸಿ

12:22 PM May 03, 2020 | Naveen |

ಹುಣಸಗಿ: ಕೋವಿಡ್ ಸುರಕ್ಷತೆಗಾಗಿ ಮಾಸ್ಕ್ ಹಾಗೂ ಸಾನಿಟೈಜರ್‌ ಬಳಸಬೇಕು ಎಂದು ವೈದ್ಯಾಧಿಕಾರಿ ನಜೀಮಾ ಮೋಸಿನ್‌ ಹೇಳಿದರು. ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸಾನಿಟೈಜರ್‌ ವಿತರಿಸಿ ಅವರು ಮಾತನಾಡಿದರು.

Advertisement

ಕೋವಿಡ್ ವೈರಸ್‌ ತಪ್ಪಿಸಿಕೊಳ್ಳಲು ಸ್ವಚ್ಛತೆ ಅಗತ್ಯವಾಗಿದೆ. ಸಾಮಾಜಿಕ ಅಂತರ ಹಾಗೂ ಮನೆಯಲ್ಲಿರುವುದೇ ಇದಕ್ಕೆ ಸರಿಯಾದ ಮದ್ದು. ಹೀಗಾಗಿ ಕೋವಿಡ್  ನಿಯಮ ಸೂಚನೆಗಳನ್ನು ಪಾಲಿಸಬೇಕು ಎಂದು ಹೇಳಿದರು. 42 ಅಂಗನವಾಡಿ ಕಾರ್ಯಕರ್ತೆಯರು, 36 ಅಂಗನವಾಡಿ ಸಹಾಯಕಿಯರು ಮತ್ತು 36 ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಗಳು ಮತ್ತು ಸಾನಿಟೈಜರ್‌ ವಿತರಿಸಲಾಯಿತು. ವಲಯ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಚವ್ಹಾಣ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next