Advertisement
ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಕೂಲಿಕಾರರ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
ನೆರೆ ಹಾವಳಿ ಪೀಡಿತ ಪ್ರದೇಶದಲ್ಲಿ ಜನರ ಜೀವನ ಹದೆಗೆಟ್ಟಿದ್ದು, ಅವರ ಬದುಕು ನೀರು ಪಾಲಾಗಿದೆ. ಪುನರ್ವಸತಿ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಸುರೇಖಾ ಕುಲಕರ್ಣಿ ಮಾತನಾಡಿ, ಹಕ್ಕುಗಳಿಗಾಗಿ ಹೋರಾಟ ಮಾಡಲು ಹೋದರೆ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಆದ್ದರಿಂದ ನಮ್ಮ ಹಕ್ಕು ಪಡೆದುಕೊಳ್ಳಲು ನಾವೇ ಹೋರಾಟ ಮಾಡುವುದು ಅನಿವಾರ್ಯ. ಸಂಘಟಿತರಾಗಿ ಹೋರಾಟ ಮಾಡಿದ್ದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದರು. ಮುಖಂಡ ದಾವಲಸಾಬ ನದಾಫ್ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದಂತೆ ಕೂಲಿಕಾರರು ಕೂಡ ಹೋರಾಟ ಮಾಡಲು ಮುನ್ನುಗ್ಗಬೇಕಿದೆ ಎಂದರು. ಸಮ್ಮೇಳನ ಆರಂಭಕ್ಕೂ ಮುನ್ನ ಪ್ರಾರಂಭವಾದ ಮೆರವಣಿಗೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ನೀಲಕಂಠೇಶ್ವರ ದೇವಸ್ಥಾನದವರೆಗೂ ನಡೆಯಿತು.
Related Articles
Advertisement