ಹುನಗುಂದ: ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಮುಗಿದಿದ್ದರಿಂದ ತಿಂಗಳ ಮಟ್ಟಿಗೆ ಬಸ್ ಪಾಸ್ ಪಡೆಯಲು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹರಸಾಹಸ ಪಡುವ ಘಟನೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಹುನಗುಂದದ ವಿವಿಧ ಕಾಲೇಜಗಳ ನೂರಾರು ವಿದ್ಯಾರ್ಥಿಗಳು ಬಸ್ ಪಾಸ್ ಅವಧಿಯ ಕೊನೆಯ ದಿನ ಮಂಗಳವಾರ ಏಕಕಾಲದಲ್ಲಿ ಎಲ್ಲ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಬಂದಿದ್ದರಿಂದ ಅದರಲ್ಲಿ ಒಂದೇ ಕೌಂಟರ್‌ನಲ್ಲಿ ಪಾಸ್ ನೀಡುತ್ತಿರುವುದರಿಂದ ಕೆಲ ಸಮಯದವರೆಗೆ ವಿದ್ಯಾರ್ಥಿಗಳು ಮತ್ತು ಪಾಸ್ ಕೊಡುವ ಸಾರಿಗೆ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟರು. ಪರೀಕ್ಷೆಗಳು ಆರಂಭವಾಗಲೂ ಕೆಲ ದಿನಗಳು ಮಾತ್ರ ಉಳಿದಿದ್ದು, ಅದಕ್ಕಾಗಿ ಮುಗಿದ ಪಾಸ್ ಬೇಗನೇ ತೆಗೆದುಕೊಂಡು ಬೇಗ ಮನೆ ಸೇರಿದರೇ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಮುಂದಾದರು.
Advertisement
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವ ಮುನ್ನವೇ ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವ ಏ. 30ಕ್ಕೆ ಮುಗಿದಿದ್ದರಿಂದ ಮೇ 2ರಿಂದ 22ರವರೆಗೆ ಬಿಎ, ಬಿಕಾಂ, ಬಿ.ಎಸ್‌ಸಿ ವಿದ್ಯಾರ್ಥಿಗಳ ಪರೀಕ್ಷೆಗಳ ಇದ್ದು, ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆಗೆ ಬರಲು ಬಸ್ ಪಾಸ್ ಅವಶ್ಯವಾಗಿದೆ. ಅದಕ್ಕಾಗಿ ಪದವಿ ವಿದ್ಯಾರ್ಥಿಗಳು ಒಂದು ತಿಂಗಳ ಮಟ್ಟಿಗೆ ತಮ್ಮ ಪಾಸ್ ಪಡೆಯಲು ನೂಕು ನುಗ್ಗಲಿನಲ್ಲಿಯೇ ಅದು ಸರತಿ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ಪಾಸ್ ಪಡೆಯುತ್ತಿರುವುದು ವಿಶೇಷವಾಗಿತ್ತು.